ಕೊಪ್ಪಳ: 3 ರೂಪಾಯಿಗೆ ಮಸಾಲೆ ದೋಸೆ, 5 ರೂಪಾಯಿಗೆ 2 ಮಸಾಲೆ ದೋಸೆ. ಇಂದಿರಾ ಕ್ಯಾಂಟೀನ್‍ನಲ್ಲಿ ಅನ್ಕೋತಿದ್ದೀರಾ. ಖಂಡಿತಾ ಅಲ್ಲ, ಇದು ಕೊಪ್ಪಳದಲ್ಲಿ ಸಮಾಜ ಸೇವೆ ಉದ್ದೇಶದಿಂದ ಮಹಿಳೆಯರು ನಡೆಸುತ್ತಿರುವ ಓಪನ್ ದೋಸಾ ಕ್ಯಾಂಟೀನ್.
ಮೆಹಬೂಬಿ ಮತ್ತು ಮರ್ತೂಜಾ ಎಂಬವರು ಕಳೆದ 10 ವರ್ಷಗಳಿಂದ ಕೊಪ್ಪಳದ ಗಂಗಾವತಿಯ ಪಾಂಡುರಂಗ ದೇಗುಲದ ಬಳಿ ತೆರೆದ ಹೋಟೆಲ್ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‍ನಲ್ಲಿ 5 ರೂಪಾಯಿಗೆ ತಿಂಡಿ ಕೊಡುತ್ತಿದ್ದರೆ, ಇವರು ಕೇವಲ 3 ರೂಪಾಯಿಗೆ ಒಂದು ದೋಸೆ ನೀಡ್ತಾರೆ. 5 ರೂಪಾಯಿ ಕೊಟ್ರೆ 2 ಮಸಾಲೆ ದೋಸೆ ನೀಡ್ತಾರೆ. ಇದರ ಜೊತೆಗೆ ರುಚಿರುಚಿಯಾದ ಕೊಬ್ಬರಿ ಚಟ್ನಿ ಕೂಡ ಇರುತ್ತದೆ. ಹಾಗಂತ ಇವರು ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಸಮಾಜಸೇವೆ ಉದ್ದೇಶದಿಂದ ಅಗ್ಗದ ದರದಲ್ಲಿ ದೋಸೆ ನೀಡುತ್ತಿದ್ದು, ಅದಕ್ಕೆ ತಗುಲುವ ಖರ್ಚು ಬಂದ್ರೆ ಸಾಕು ಅಂತ ಮೆಹಬೂಬಿ ಹೇಳಿದ್ದಾರೆ.
Advertisement
ಬೆಳಗ್ಗೆ 5.30ಕ್ಕೆ ಅಂಗಡಿ ತೆರೆಯುವ ಇವರು 10 ಗಂಟೆವರೆಗೆ ಈ ಸೇವೆ ಮಾಡ್ತಾರೆ. ಬೆಳಗ್ಗೆಯಿಂದಲೇ ಮಕ್ಕಳು, ಕೂಲಿ ಕಾರ್ಮಿಕರು ದೋಸೆ ಸವಿಯಲು ಇವರ ಅಂಗಡಿಗೆ ಮುಗಿಬೀಳ್ತಾರೆ.