- 4,984 ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ 40,000 ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕಾರ.
- ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ವಿವಿಧ ವಿಭಾಗಗಳ ಮತ್ತು ವೈವಿಧ್ಯಮಯ 27 ರಾಜ್ಯಗಳ ಹುಡುಗಿಯರು ಮತ್ತು ಹುಡುಗರು ಸಮಾನ ಸಂಖ್ಯೆಯಲ್ಲಿ ಆಯ್ಕೆ.
- ಆಯ್ಕೆಯಾದ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳು 2 ಲಕ್ಷ ರೂ. ವರೆಗಿನ ಅನುದಾನ ಪಡೆಯುತ್ತಾರೆ. ಅಲ್ಲದೇ ಅಧ್ಯಯನದ ಅವಧಿಯಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮದ ಅಡಿಯಲ್ಲಿ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್‌ನ ಭಾಗವಾಗಲಿದ್ದಾರೆ.
- ರಿಲಯನ್ಸ್ ಫೌಂಡೇಶನ್ 10 ವರ್ಷಗಳಲ್ಲಿ 50,000 ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಲು ಬದ್ಧವಾಗಿದೆ.
ಮುಂಬೈ: 27 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 5 ಸಾವಿರ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ (Graduate students) 2022-23ನೇ ಸಾಲಿನ ರಿಲಯನ್ಸ್ ಫೌಂಡೇಶನ್ (Reliance Foundation) ಪದವಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಆಯ್ಕೆಯಾದ ವಿದ್ಯಾರ್ಥಿಗಳು 2 ಲಕ್ಷ ರೂ. ವರೆಗೆ ವಿದ್ಯಾರ್ಥಿವೇತನ (Student Scholarships) ಪಡೆಯುತ್ತಾರೆ. ಜೊತೆಗೆ ಈಗಾಗಲೇ ಸಕ್ರೀಯವಾಗಿರುವ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್‌ನ ಭಾಗವಾಗುವ ಅವಕಾಶ ಪಡೆಯಲಿದ್ದಾರೆ.
Advertisement
ಈ ಕುರಿತು ಮಾತನಾಡಿರುವ ರಿಲಯನ್ಸ್ ಫೌಂಡೇಶನ್ ಸಿಇಒ ಜಗನ್ನಾಥ ಕುಮಾರ್ (Jagannath Kumar), ಉತ್ತಮ ಶಿಕ್ಷಣ ಪಡೆಯುವ ಯುವ ಜನರ ಕನಸಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನವು ರೆಕ್ಕೆಗಳನ್ನು ನೀಡಲಿದೆ ಎಂದು ಆಶಿಸುತ್ತೇವೆ. ರಿಲಯನ್ಸ್ ಫೌಂಡೇಶನ್ ವೈವಿಧ್ಯಮಯ ವಿದ್ಯಾರ್ಥಿಗಳ ಗುಂಪನ್ನು ಹೊಂದಿದೆ. ಭಾರತದ ಬಹುತೇಕ ಎಲ್ಲಾ ರಾಜ್ಯಗಳಿಂದ ಆಯ್ಕೆಯಾಗಿದ್ದಾರೆ. ಹುಡುಗ, ಹುಡುಗಿಯರು ಸಮಾವಾಗಿ ಪ್ರತಿನಿಧಿಸುತ್ತಿದ್ದಾರೆ. ಆಯ್ಕೆಯಾದ ಪ್ರತಿಯೊಬ್ಬರನ್ನೂ ನಾವು ಅಭಿನಂದಿಸುತ್ತೇವೆ ಎಂದು ಹೇಳಿದ್ದಾರೆ.
Advertisement
Advertisement
ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿವೇತನವನ್ನು ಯಾವುದೇ ಅಧ್ಯಯನದ ಸ್ಟ್ರೀಮ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ನೀಡಲಾಗುತ್ತದೆ. ಈ ವರ್ಷಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಎಂಜಿನಿಯರಿಂಗ್/ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ವಾಣಿಜ್ಯ, ಕಲೆ, ವ್ಯಾಪಾರ/ನಿರ್ವಹಣೆ, ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಕಾನೂನು, ಶಿಕ್ಷಣ, ಆತಿಥ್ಯ, ವಾಸ್ತುಶಿಲ್ಪ ಮತ್ತು ಇತರ ವೃತ್ತಿಪರ ಪದವಿಗಳಿಂದ ಬಂದಿದ್ದಾರೆ. 2022-23ನೇ ಸಾಲಿನಲ್ಲಿ 4,984ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 40,000 ವಿದ್ಯಾರ್ಥಿಗಳ ಅರ್ಜಿಗಳಲ್ಲಿ 5,000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಶೇ.51 ಹುಡುಗಿಯರನ್ನು ಆಯ್ಕೆ ಮಾಡಲಾಗಿದೆ.
Advertisement
ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮರ್ಥ್ಯ ಪರೀಕ್ಷೆ, 12ನೇ ತರಗತಿ ಅಂಕಗಳು ಮತ್ತು ಇತರ ಅರ್ಹತಾ ಮಾನದಂಡಗಳು ಒಳಗೊಂಡಿದೆ. ಕಾರ್ಯಕ್ರಮಕ್ಕೆ ಅಂತರ್ಗತವಾಗಿರುವ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಈ ಸುತ್ತಿನಲ್ಲಿ 99 ವಿಕಲಚೇತನ ವಿದ್ಯಾರ್ಥಿಗಳನ್ನ ವಿದ್ಯಾರ್ಥಿವೇತನಕ್ಕಾಗಿ ಆಯ್ಕೆ ಮಾಡಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ತನ್ನ ಬದ್ಧತೆಯನ್ನು ಬಲಪಡಿಸುವ ಮೂಲಕ ರಿಲಯನ್ಸ್ ಫೌಂಡೇಶನ್ ಮುಂದಿನ 10 ವರ್ಷಗಳಲ್ಲಿ 50,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಘೋಷಿಸಿತ್ತು. ಈ ವಿದ್ಯಾರ್ಥಿವೇತನ ಎಲ್ಲರಿಗೂ ಶಿಕ್ಷಣದ ಪ್ರವೇಶ ಸುಲಭಗೊಳಿಸುವ ಮತ್ತು ಭಾರತದ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ರಿಲಯನ್ಸ್‌ನ ಪರಂಪರೆಯನ್ನ ಮುಂದುವರಿಸುತ್ತದೆ. 1996 ರಿಂದ ಧೀರೂಭಾಯಿ ಅಂಬಾನಿ ವಿದ್ಯಾರ್ಥಿವೇತನವನ್ನ ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ಸುಮಾರು 13,000 ಪದವಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅದರಲ್ಲಿ 2,720 ವಿದ್ಯಾರ್ಥಿಗಳು ವಿಶೇಷಚೇತನರು.
ಆಯ್ದ ವಿದ್ಯಾರ್ಥಿಗಳು ತಮ್ಮ ಆಯ್ಕೆ ಮತ್ತು ಹೆಚ್ಚಿನ ವಿವರಗಳ ಬಗ್ಗೆ ನೇರವಾಗಿ ಸಂವಹನ ಸ್ವೀಕರಿಸುತ್ತಾರೆ. ಅರ್ಜಿದಾರರು ತಮ್ಮ ಅರ್ಜಿಗಳ ಫಲಿತಾಂಶವನ್ನು ತಿಳಿಯಲು www.reliancefoundation.org ಗೆ ಭೇಟಿ ನೀಡಬಹುದು.
2022-23ಕ್ಕೆ ಆಯ್ಕೆಯಾದ ರಿಲಯನ್ಸ್ ಫೌಂಡೇಶನ್ ಸ್ನಾತಕ್ಕೋತ್ತರ ವಿದ್ಯಾರ್ಥಿವೇತನ ಪ್ರಕಟಣೆ ಜುಲೈನಲ್ಲಿ ಹೊರಬರಲಿದೆ. ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿವೇತನದ (2023-24) ಮುಂದಿನ ಸುತ್ತಿನ ಅರ್ಜಿಗಳನ್ನು ಮುಂಬರುವ ತಿಂಗಳಲ್ಲಿ ನೀಡಲಾಗುವುದು.
ರಿಲಯನ್ಸ್ ಫೌಂಡೇಶನ್ ಬಗ್ಗೆ ನಿಮಗೆಷ್ಟು ಗೊತ್ತು?
ರಿಲಯನ್ಸ್ ಫೌಂಡೇಶನ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಲೋಕೋಪಕಾರಿ ಸಂಸ್ಥೆಯಾಗಿದ್ದು, ನವೀನ ಮತ್ತು ಸುಸ್ಥಿರ ಪರಿಹಾರಗಳ ಮೂಲಕ ಭಾರತದ ಅಭಿವೃದ್ಧಿ ಸವಾಲುಗಳನ್ನ ಎದುರಿಸುವಲ್ಲಿ ವೇಗವರ್ಧಕ ಪಾತ್ರವನ್ನು ವಹಿಸುವ ಗುರಿ ಹೊಂದಿದೆ. ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ನೀತಾ ಅಂಬಾನಿ (Nita Ambani) ಅವರ ನೇತೃತ್ವದಲ್ಲಿ ಸಾಮಾನ್ಯ ಜನರ ಯೋಗಕ್ಷೇಮ ಮತ್ತು ಉತ್ತಮ ಗುಣಮಟ್ಟದ ಜೀವನಕ್ಕಾಗಿ ಪರಿವರ್ತಕ ಬದಲಾವಣೆಗಳನ್ನ ಸುಲಭಗೊಳಿಸಲು ಪಟ್ಟುಬಿಡದೆ ಕೆಲಸ ಮಾಡುತ್ತಿದೆ. ರಿಲಯನ್ಸ್ ಫೌಂಡೇಶನ್ ಗ್ರಾಮೀಣ ಪರಿವರ್ತನೆ, ಶಿಕ್ಷಣ, ಆರೋಗ್ಯ, ಅಭಿವೃದ್ಧಿಗಾಗಿ ಕ್ರೀಡೆ, ಮಹಿಳಾ ಸಬಲೀಕರಣ, ವಿಪತ್ತು ನಿರ್ವಹಣೆ, ನಗರ ನವೀಕರಣ ಮತ್ತು ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಜೊತೆಗೆ ದೇಶಾದ್ಯಂತ 54,200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮತ್ತು ಹಲವು ನಗರಗಳಲ್ಲಿ ಸುಮಾರು 69.5 ಮಿಲಿಯನ್ ಜನರ ಜೀವನ ತಲುಪಿದೆ. ಹೆಚ್ಚಿನ ಮಾಹಿತಿಗಾಗಿ https://www.reliancefoundation.org/ ಭೇಟಿ ನೀಡಬಹುದು.