ಬಳ್ಳಾರಿ: ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬ್ರಿಡ್ಜ್ (Accident Near Hosapete Vaddarahalli Bridge) ಬಳಿ ಶುಕ್ರವಾರ ನಡೆದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರವನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ವಿಜಯನಗರ ಉಸ್ತುವಾರಿ ಸಚಿವರೂ ಆಗಿರುವ ಜಮೀರ್ (Zameer Ahmed Khan) ಇಂದು (ಶನಿವಾರ) ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಅಲ್ಲದೆ ವಿಮ್ಸ್ ಶವಗಾರ ಮತ್ತು ಮೃತರ ಮನೆಗೆ ಕೂಡ ಜಮೀರ್ ಭೇಟಿ ನೀಡಿ ಕುಟುಂಬಕ್ಕೆ ಧೃತಿಗೆಡದಂತೆ ಧೈರ್ಯ ತುಂಬಿದರು.
Advertisement
Advertisement
ಬಳಿಕ ಮಾತನಾಡಿದ ಅವರು, ಮುಸ್ಲಿಮರಲ್ಲಿ ಬಕ್ರಿದ್ (Bakrid) ಬಳಿಕ ಬಾಸಿ ಖುತ್ಬ ಎನ್ನುವ ಆಚರಣೆ ಮಾಡುತ್ತೇವೆ. ಹಬ್ಬದಾಚರಣೆ ಮಾಡಲು ಕೌಲಬಜಾರನ 19 ಮಂದಿ ಎರಡು ಆಟೋ ಮೂಲಕ ತೆರಳಿದ್ರು. ಈ ವೇಳೆ ಅಪಘಾತ ಸಂಭವಿಸಿದ್ದು, 9 ಜನರು ಸಾವನ್ನಪ್ಪಿದ್ದಾರೆ. ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ ಎರಡು ಲಕ್ಷ ಪರಿಹಾರ ನೀಡಲಾಗ್ತದೆ ಎಂದರು.
Advertisement
Advertisement
ಗಾಯಾಳುಗಳಿಗೆ 50 ಸಾವಿರ ಹಣ ನೀಡಲಾಗುತ್ತದೆ. ಅಲ್ಲದೇ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಆಟೋದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣ ಮಾಡಿರುವುದರ ಬಗ್ಗೆ ವಿಚಾರ ಮಾಡ್ತೇವೆ. ಇಂತಹ ಘಟನೆ ನಡೆಯಬಾರದ್ದಾಗಿತ್ತು ಎಂದು ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫ್ರಾನ್ಸ್ ಧಗ ಧಗ – ಭದ್ರತೆಗೆ 45 ಸಾವಿರ ಪೊಲೀಸರ ನಿಯೋಜನೆ, 994 ಮಂದಿ ಅರೆಸ್ಟ್
ನಡೆದಿದ್ದೇನು..?: ಹೊಸಪೆಟೆಯ ವಡ್ಡರಹಳ್ಳಿ ಬಿಡ್ಜ್ ಬಳಿ ಎರಡು ಆಟೋ ಹಾಗೂ ಲಾರಿ ನಡುವೆ ನಡೆದ ಭೀಕರ ಸರಣಿ ಅಪಘಾತ ನಡೆದಿತ್ತು. ಘಟನೆಯಲ್ಲಿ 9 ಜನ ಮೃತಪಟ್ಟು, 10 ಮಂದಿ ಗಾಯಗೊಂಡಿದ್ದರು. ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಕೋಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.
Web Stories