ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ದಿನಕಳೆದಂತೆ ಕಾಡಾನೆ ಮಾನವ ಸಂಘರ್ಷ ಮಿತಿಮೀರುತ್ತಿದೆ. ಕಾಡು ಬಿಟ್ಟು ನಾಡಲ್ಲೇ ವಾಸ್ತವ್ಯ ಹೂಡುತ್ತಿರೋ ಕಾಡಾನೆಗಳು (Wild Elephant) ಹಗಲಲ್ಲೇ ಜನರ ಮೇಲೆ ದಾಳಿ ಮಾಡ್ತಿವೆ. ಇಂದು (ಏ.25) ಮುಂಜಾನೆ ಅಂತಹದ್ದೇ ಘಟನೆ ನಡೆದಿದೆ. ಬೆಳಗ್ಗಿನ ಜಾವ ಮನೆಯಿಂದ ಹೊರಗೆ ಬಂದ ಕಾಫಿ ತೋಟದ ಮಾಲೀಕನ ಮೇಲೆ ಕಾಡಾನೆ ದಾಳಿ ನಡೆಸಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಕಾಡಾನೆ ದಾಳಿಗೆ ಕಳೆದ ಮೂರು ದಿನಗಳಲ್ಲಿ 2 ಜೀವಗಳು ಬಲಿಯಾಗಿವೆ.
ಕೊಡಗು ಜಿಲ್ಲೆ ಇತ್ತೀಚೆಗೆ ಹೆಚ್ಚು ಸುದ್ದಿಯಾಗ್ತಿರೋದು ಕಾಡಾನೆ – ಮಾನವ ಸಂಘರ್ಷ ವಿಚಾರಕ್ಕೆ. ದಿನಬೆಳಗಾದ್ರೆ ಕಾಡಾನೆ ಅಲ್ಲಿ ದಾಳಿ ಮಾಡ್ತು, ಇಲ್ಲಿ ದಾಳಿ (Elephant Attack) ಮಾಡ್ತು ಅನ್ನೋ ಸುದ್ದಿಯೇ ಕೇಳಿಬರುತ್ತಿದೆ. ಕಾಡು ತೊರೆದು ಕಾಫಿ ತೋಟಗಳಲ್ಲೇ ವಾಸ್ತವ್ಯ ಹೂಡುತ್ತಿರೋ ಆನೆಗಳು ಜನವಸತಿ ಪ್ರದೇಶಗಳಲ್ಲಿ ಸುತ್ತಾಡುತ್ತಾ, ಜನರ ಮೇಲೆ ದಾಳಿ ಮಾಡುವುದು ಮಾಮೂಲಾಗಿದೆ. ಇದನ್ನೂ ಓದಿ: ಸುರತ್ಕಲ್-ಬಿ.ಸಿ.ರೋಡ್ ಪೋರ್ಟ್ ರಸ್ತೆ ಕಾಮಗಾರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಚಾಲನೆ
ಅದೇ ರೀತಿ ಇಂದು ಬೆಳಗ್ಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಸವನಹಳ್ಳಿ ಹಾಡಿ ಸಮೀಪದ ಕಾಫಿ ಬೆಳೆಗಾರ ಸೊಳ್ಳೆಕೋಡಿ ಚಿಣ್ಣಪ್ಪ ಎಂಬುವವರು ತನ್ನ ಮನೆಯ ಮುಂದೆ ಯಾರೋ ಓಡಾಟ ನಡೆಸುತ್ತಿದ್ದಾರೆ ಎಂದು ಮನೆ ಬಾಗಿಲು ತೇಗೆದು ಹೋರ ಬಂದಿದ್ದಾರೆ. ಈ ಸಂದರ್ಭದಲ್ಲಿ ಕಾಡಾನೆಯೊಂದು ಏಕಾಏಕಿ ದಾಳಿ ಮಾಡಿದೆ. ಇದರಿಂದಾಗಿ ಚಿಣ್ಣಪ್ಪ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ನಿನ್ನೆಯೂ ಕೂಡ ಸಿದ್ದಾಪುರ ಸಮೀಪದ ಪಾಲಿಬೆಟ್ಟ ಸಮೀಪದ ಎಮ್ಮೆಗುಂಡಿಯ ಬಳಿ ವಾಯು ವನಡೆದಿದಲ್ಲಿ ಚೆಲ್ಲ ಮೇಸ್ತ್ರಿ (55) ಎಂಬುವವರ ಮೇಲೆ ಕಾಡಾನೆ ದಾಳಿ ಬಲಿ ಪಡೆದಿತ್ತು. ಹೀಗಾಗಿ ಮೂರು ದಿನಗಳ ಅಂತರದಲ್ಲಿ ಇಬ್ಬರನ್ನು ಕಾಡಾನೆ ಬಲಿ ಪಡೆದಿದೆ. ಇನ್ನೂ ಘಟನಾ ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಅನಧಿಕೃತ, ಅಕ್ರಮ ಬಡಾವಣೆ ನಿರ್ಮಾಣ ಮಾಡಿದ್ರೆ ಸರ್ಕಾರದಿಂದಲೇ ಮುಟ್ಟುಗೋಲು – ಕೃಷ್ಣಬೈರೇಗೌಡ
ಇನ್ನೂ ಇತ್ತೀಚಿನ ದಿನಗಳಲ್ಲಿ ವೀರಾಜಪೇಟೆ ಹಾಗೂ ಪೋನ್ನಂಪೇಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹಾಗೂ ಹುಲಿಗಳ ಉಪಟಳ ಹೆಚ್ಚಾಗಿದೆ. ಅರಣ್ಯ ಇಲಾಖೆಗೆ ಎಷ್ಟೇ ಬಾರಿ ಮನವಿ ಮಾಡಿದರೂ ಪ್ರಯೋಜನವಾಗ್ತಿಲ್ಲ. ಆದ್ದರಿಂದ ಗ್ರಾಮದ ಜನರು ಭಯದಲ್ಲೇ ಬದುಕು ಸಾಗಿಸುವಂತಾಗಿದೆ. ಇದನ್ನೂ ಓದಿ: ಒಬ್ಬ ಪಾಕಿಸ್ತಾನಿ ಪ್ರಜೆಯೂ ಭಾರತದಲ್ಲಿ ಉಳಿಯಬಾರದು – ರಾಜ್ಯಗಳಿಗೆ ಅಮಿತ್ ಶಾ ನಿರ್ದೇಶನ
ಈ ಬಗ್ಗೆ ವಿರಾಜಪೇಟೆ ಶಾಸಕ ಎ.ಎಸ್ ಪೋನ್ನಣ್ಣ ಅವರನ್ನ ಕೇಳಿದ್ರೆ, ನಾವು ಇರುವಂತಹದೇ ಅರಣ್ಯ ಗಡಿಭಾಗದಲ್ಲಿ ಮೊನ್ನೆ ಹುಲಿಯ ಕಾರ್ಯಚರಣೆಗೆ ಸಚಿವರು ಎರಡು ಹುಲಿಯನ್ನು ಹಿಡಿಯಲು ಆದೇಶ ನೀಡಿದ್ದಾರೆ. ತಾನು ಕೂಡ ಕಾರ್ಯಚರಣೆಯಲ್ಲಿ ಭಾಗಿಯಾಗಿದೆ. ಬ್ರಹ್ಮಗಿರಿ ಅರಣ್ಯ ಪ್ರದೇಶ ಪಕ್ಕದಲ್ಲೇ ಇದೆ. ಅದನ್ನ ಹುಡುಕುವ ಕೆಲಸ ಆಗುತ್ತಿದೆ. ಇನ್ನೂ ಕಾಡಾನೆಗಳ ಹಾವಳಿ ಸಿದ್ದಾಪುರ ಪಾಲಿಬೆಟ್ಟ ಗ್ರಾಮದಲ್ಲಿ ಹೆಚ್ಚಾಗಿ ಆಗುತ್ತಿದೆ. ಕಾಡಾನೆಯನ್ನು ಗುರುತಿಸಿ ಅದನ್ನು ಸೆರೆಹಿಡಿಯುವ ಕೆಲಸ ಮಾಡುತ್ತೇವೆ. ಆದರೆ ಈ ರೀತಿಯಾಗಿ ಮಾನವ ವನ್ಯಜೀವಿ ಸಂಘರ್ಷ ಮಾತ್ರ ಮುಂದುವರೆಯುತ್ತಿದೆ. ಅರಣ್ಯ ಭೂಮಿ ಒತ್ತುವರಿ ಮಾಡಿರುವುದರಿಂದ ವನ್ಯಜೀವಿ ಉಪಟಳ ಹೆಚ್ಚಾಗಿದೆ. ಹಂತ ಹಂತವಾಗಿ ಈ ಘರ್ಷಣೆಯನ್ನು ತಡೆಯುವ ಕೆಲಸ ಆಗುತ್ತದೆ. ಅಲ್ಲದೇ ಈಗಾಗಲೇ ಮೃತಪಟ್ಟ ಕುಟುಂಬಗಳಿಗೆ 15 ಲಕ್ಷ ರೂ. (ತಲಾ 7.50 ಲಕ್ಷ ರೂ.) ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ; ನನ್ನ ಗಂಡ ಒಳ್ಳೆಯವನು ಅಂತ ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ