ಇಂಫಾಲ್: ಮಣಿಪುರದ ಕಾಂಗ್‍ಪೊಕ್ಪಿ ಜಿಲ್ಲೆಯ ಹರಾಥೆಲ್ ಮತ್ತು ಕೊಬ್ಶಾ ಗ್ರಾಮಗಳ ಮತ್ತೆ ಹಿಂಸಾಚಾರ (Manipur Violence) ಆರಂಭಗೊಂಡಿದೆ. ಕಿಡಿಗೇಡಿಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಓರ್ವ ಇಂಡಿಯಾ ರಿಸರ್ವ್ ಬೆಟಾಲಿಯನ್ (India Reserve Batallion) ಸಿಬ್ಬಂದಿ ಮತ್ತು ಚಾಲಕ ಹುತಾತ್ಮರಾಗಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.
ಕುಕಿ-ಜೋ ಸಮುದಾಯದ ಮೇಲಿನ ಪ್ರಚೋದಿತ ದಾಳಿಯನ್ನು ಖಂಡಿಸಿ ಕಾಂಗ್‍ಪೋಕ್ಪಿ ಮೂಲದ ಬುಡಕಟ್ಟು ಐಕ್ಯತೆಯ ಸಮಿತಿ ಪ್ರತಿಭಟನೆ ನಡೆಸಿದೆ. ಬಳಿಕ ದಾಳಿಯ ನಂತರ ಕರೆದ ಸಭೆಯಲ್ಲಿ ಮಣಿಪುರದಲ್ಲಿ ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕ ಆಡಳಿತ ಮಂಡಳಿಯನ್ನು ಸ್ಥಾಪಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ. ಇದನ್ನೂ ಓದಿ: 30 ವರ್ಷದ ಇತಿಹಾಸ ಮುರಿದ ಕಾಂಗ್ರೆಸ್: ಸ್ವಕ್ಷೇತ್ರದಲ್ಲೇ ವಿಜಯೇಂದ್ರಗೆ ಹಿನ್ನಡೆ
- Advertisement
ದಾಳಿ ನಡೆದ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಹಿಂಸಾಚಾರದಲ್ಲಿ ತೊಡಗಿರುವವರನ್ನು ಬಂಧಿಸಲು ಹುಡುಕಾಟ ನಡೆಸಲಾಗುತ್ತಿದೆ.
- Advertisement
ಪರಿಶಿಷ್ಟ ಪಂಗಡದ (ಎಸ್‍ಟಿ) ಸ್ಥಾನಮಾನಕ್ಕಾಗಿ ಮೇಥಿ ಬುಡಕಟ್ಟು ಜನಾಂಗ ಮೆರವಣಿಗೆ ನಡೆಸಿತ್ತು. ಇದು ಮೇ 3 ರಂದು ಎರಡು ಬುಡಕಟ್ಟು ಗುಂಪುಗಳಾದ ಕುಕಿ ಮತ್ತು ಮೇಥಿ ನಡುವೆ ನಡೆದ ಜನಾಂಗೀಯ ಘರ್ಷಣೆಗೆ ಕಾರಣವಾಗಿತ್ತು. ಈ ಘರ್ಷಣೆಯಲ್ಲಿ ಸುಮಾರು 200 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಪುಟ್ಗೋಸಿ ಕರೆಂಟ್‍ಗೆ ಸಿಎಂ, ಡಿಸಿಎಂ ಕಾಂಪಿಟೇಷನ್ ಮೇಲೆ ಅಧಿಕಾರಿಗಳನ್ನು ಕಳುಹಿಸಿದ್ರು: ಹೆಚ್ಡಿಕೆ