ಲಕ್ನೋ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರ ಪುತ್ರ ಕರಣ್ ಭೂಷಣ್ ಸಿಂಗ್ (Karan Bhushan Singh) ಅವರ ಬೆಂಗಾವಲು ಪಡೆಗೆ ಸೇರಿದ ಟೊಯೊಟಾ ಫಾರ್ಚುನರ್ ಎಸ್‌ಯುವಿ (Toyota Fortuner SUV) ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 17 ವರ್ಷದ ಓರ್ವ ಸೇರಿದಂತೆ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೋಂಡಾದಲ್ಲಿ ನಡೆದಿದೆ.
Advertisement
ಬುಧವಾರ (ಇಂದು) ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ರೇಹಾನ್ (17) ಮತ್ತು ಶಹಜಾನ್ (24) ಎಂಬ ಯುವಕರು ಔಷಧಿ ಖರೀದಿಸಲು ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಎಸ್‌ಯುವಿ ಡಿಕ್ಕಿ ಹೊಡೆದಿದೆ. ಬಳಿಕ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಜನರು ಜಮಾಯಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೃತರ ತಾಯಿ ಚಂದಾ ಬೇಗಂ ಎಂಬವರು ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
Advertisement
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು (UP Police) ಚಾಲಕನನ್ನ ಬಂಧಿಸಿ, ಎಸ್‌ಯುವಿ ಅನ್ನು ವಶಪಡಿಸಿಕೊಂಡಿದ್ದಾರೆ. ಆದ್ರೆ ಅಪಘಾತ ಸಂದರ್ಭದಲ್ಲಿ ಕರಣ್ ಭೂಷಣ್ ಸಿಂಗ್ ಪ್ರಯಾಣಿಸುತ್ತಿದ್ದರೇ ಅನ್ನೂ ಬಗ್ಗೆ ಸ್ಪಷ್ಟನೆ ಇಲ್ಲ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಧೇಶ್ಯಾಮ್ ರೈ ತಿಳಿಸಿದ್ದಾರೆ. ಇದನ್ನೂ ಓದಿ: ಬಸವಕಲ್ಯಾಣ ತೆಗೆದು ಎಲ್ಲಾ ಬಸ್‌ಗಳ ಮೇಲೆ ಕ್ರೈಸ್ತ ಕಲ್ಯಾಣ ಅಂತಾ ಮಾಡುತ್ತೇನೆ: ಯಾದಗಿರಿಯಲ್ಲಿ ವ್ಯಕ್ತಿ ಕಿರಿಕ್
Advertisement
Advertisement
ಬ್ರಿಜ್ ಭೂಷಣ್ ವಿರುದ್ಧ ಮಹಿಳೆ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪದ ಕೇಳಿಬಂದ ಬಳಿಕ ಅವರನ್ನ ಅವರನ್ನ ಡಬ್ಲ್ಯೂಎಫ್‌ಒ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ದೆಹಲಿ ಕೋರ್ಟ್ ಪೊಲೀಸರಿಗೆ ಆದೇಶಿಸಿತ್ತು. ಈ ಬೆಳವಣಿಗೆ ನಂತರ ಬ್ರಿಜ್ ಭೂಷಣ್ ಅವರಿಗೆ ಬಿಜೆಪಿ ಟಿಕೆಟ್ ಸಹ ನಿರಾಕರಿಸಿತು, ಅವರ ಪುತ್ರ ಕರಣ್ ಭೂಷಣ್ ಸಿಂಗ್‌ನನ್ನ ಕಣಿಕ್ಕಿಳಿತು. ಬ್ರಿಜ್ ಭೂಷಣ್ ಅವರ ಮತ್ತೋಬ್ಬ ಪುತ್ರ ಪ್ರತೀಕ್ ಭೂಷಣ್ ಸಿಂಗ್ ಗೊಂಡಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಸಲೂನ್‌ಗೆ ಹೋಗಿ ಕ್ಲೀನ್ ಆಗಿ ಬಂದಿದ್ದಾರೆ, ಇದಕ್ಕೆ ಅಮಿತ್ ಶಾ ಡೈರೆಕ್ಟರ್: ಪ್ರಿಯಾಂಕ್ ಖರ್ಗೆ ವಾಗ್ದಾಳಿ