ಬ್ರೆಜಿಲ್: ನಗರದಲ್ಲಿ ವ್ಯಕ್ತಿಯೊಬ್ಬರು ಕೆಲವು ತಿಂಗಳಿಂದ ಮಲಬದ್ಧತೆ, ವಾಕರಿಕೆ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ವೈದ್ಯರ ಬಳಿ ತೆರಳಿ ಪರೀಕ್ಷಿಸಿದಾಗ ಗುದನಾಳದಲ್ಲಿ 2 ಕೆ.ಜಿ ತೂಕದ ಡಂಬಲ್ಸ್ ಇರುವುದು ಪತ್ತೆಯಾಗಿದೆ. ಇದನ್ನು ಕಂಡ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ.
Advertisement
ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಸರ್ಜರಿ ಕೇಸ್ ರಿಪೋರ್ಟ್ಸ್ ವರದಿ ಮಾಡಿರುವ ಪ್ರಕಾರ, 54 ವರ್ಷದ ಬ್ರೆಜಿಲಿಯನ್ ವ್ಯಕ್ತಿ ಕೆಲವು ತಿಂಗಳಿಂದ ಮಲಬದ್ಧತೆ, ವಾಕರಿಕೆ, ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಸಮಸ್ಯೆ ತೀವ್ರವಾಗುತ್ತಿದ್ದಂತೆ ವೈದ್ಯರನ್ನು ಭೇಟಿ ಮಾಡಿದ್ದಾರೆ. ಮನೌಸ್‍ನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ ಆ ವ್ಯಕ್ತಿ ತನ್ನ ಸಮಸ್ಯೆಗಳ ಬಗ್ಗೆ ವೈದ್ಯರಿಗೆ ತಿಳಿಸಿದ್ದಾರೆ. ವೈದ್ಯರು ಪರೀಕ್ಷಿಸಿ 2 ದಿನ ಔಷಧಿ ನೀಡಿ ಮತ್ತೆ 2 ದಿನ ಬಿಟ್ಟು ವಾಪಸ್ ಬರುವಂತೆ ಸಲಹೆ ನೀಡಿದ್ದಾರೆ. ಎರಡು ದಿನಗಳ ನಂತರ ವ್ಯಕ್ತಿಯ ಸಮಸ್ಯೆ ಪರಿಹಾರ ಸಿಗದೆ ಇದ್ದ ಕಾರಣ ವೈದ್ಯರು ಎಕ್ಸ್ ರೇ ಮಾಡಲು ತಿಳಿಸಿದ್ದಾರೆ. ಇದನ್ನೂ ಓದಿ: ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್
Advertisement
Advertisement
ಆದರೆ ಆತ ಎಕ್ಸ್ ರೇ ಮಾಡಲು ನಿರಾಕರಿಸಿದ್ದಾನೆ. ಬಳಿಕ ವೈದ್ಯರು ಆತನ ಮನವೊಲಿಸಿ ಎಕ್ಸ್ ರೇ ಮಾಡಿಸಿದ್ದಾರೆ. ಈ ವೇಳೆ ಎಕ್ಸ್ ರೇ ಕಂಡು ವೈದ್ಯರು ಬೆಚ್ಚಿಬಿದ್ದಿದ್ದಾರೆ. ಕಾರಣ ಎಕ್ಸ್ ರೇನಲ್ಲಿ ವ್ಯಕ್ತಿಯ ಗುದನಾಳದಲ್ಲಿ ಡಂಬಲ್ಸ್ ಇರುವುದು ಪತ್ತೆಯಾಗಿದೆ. 2 ಕೆ.ಜಿ ತೂಕದ ಡಂಬಲ್ಸ್‌ನ್ನು ಬಳಿಕ ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯ್ತಿಯಲ್ಲೇ ಸಿಗಲಿದೆ ಮದುವೆ ಸರ್ಟಿಫಿಕೇಟ್: ಸರ್ಕಾರ ಆದೇಶ
Advertisement
ಸುಮಾರು 20 ಸೆಂ.ಮೀ ಉದ್ದವಿದ್ದ ಡಂಬಲ್ಸ್, ಕೊಲೊನ್ ಗುದನಾಳವನ್ನು ಸಂಧಿಸುವ ಜಾಗದಲ್ಲಿ ಸೇರಿತ್ತು. ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಿದ್ದಾರೆ. ಆತನ ಗುದನಾಳದಲ್ಲಿ ಡಂಬಲ್ಸ್ ಹೋಗಲು ಕಾರಣ ಲೈಂಗಿಕ ತೃಷೆ ಎಂಬುದು ವರದಿಯಾಗಿದೆ.