ಬೆಂಗಳೂರು: ಹಲವರ ನೆಚ್ಚಿನ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಲು ಸಿದ್ಧತೆ ನಡೆಸಿದ್ದ ಮಂದಿಗೆ ಕಹಿ ಸುದ್ದಿ ನೀಡಿದ್ದು, ಪಟಾಕಿ ಸಿಡಿಸಲು ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಮಾತ್ರ ಅವಕಾಶ ನೀಡಲಾಗಿದೆ.
ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸುವ ನಿಯಮಗಳ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಚಿವಾಲಯ ಸುತ್ತೋಲೆ ನೀಡಿದೆ. ಈ ಕುರಿತು ಕೆಲ ನಿಯಮಗಳನ್ನು ಪ್ರಕಟಿಸಿದೆ. ಪ್ರಮುಖವಾಗಿ ಹೆಚ್ಚು ಸ್ಫೋಟಕ ಹೊಂದಿರುವ ಪಟಾಕಿ ಮಾರಾಟಕ್ಕೆ ಹಾಗೂ ಬಳಕೆಗೆ ನಿಷೇಧ ಹೇರಲಾಗಿದೆ. ದೀಪಾವಳಿ ಹಬ್ಬದ ಹಿಂದಿನ 7 ದಿನ ಹಾಗೂ ಹಬ್ಬ ಮುಗಿದ ಮೇಲೆ 7 ದಿನ ಕಟ್ಟೆಚ್ಚೆರ ವಹಿಸುವಂತೆ ಹಾಗೂ ಪೊಲೀಸ್ ಇಲಾಖೆಯ ನಿಗದಿತ ನಿಯಮ ಪಾಲನೆ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ.
Advertisement
Advertisement
ಉಳಿದಂತೆ ಸ್ಥಳೀಯ ಪಾಲಿಕೆಯಿಂದ ಪಟಾಕಿ ಹೊಡೆಯುವ ಸಮಯ ಹಾಗೂ ಪಟಾಕಿ ವಿಧಾನದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಅವಧಿ ಮೀರಿ ಪಟಾಕಿ ಸಿಡಿಸಿದರೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅವಕಾಶ ನೀಡಲಾಗಿದೆ. ಪಟಾಕಿ ಮಾರಾಟದ ಮೇಲೂ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಜೊತೆಗೆ ನಿರ್ಬಂಧಿತ ಸ್ಫೋಟಕ ಪಟಾಕಿಗಳ ಬಗ್ಗೆಯೂ ಎಚ್ಚರವಾಗಿರಬೇಕು ತಿಳಿಸಿದ್ದು, ಸಮೂಹಿಕವಾಗಿ ಪಟಾಕಿ ಸಿಡಿಸುವ ಸಾಧ್ಯತೆಗಳ ಕುರಿತು ಸ್ಥಳೀಯ ಸಂಸ್ಥೆಗಳು ಚಿಂತನೆ ನಡೆಸುವ ಕುರಿತು ಉಲ್ಲೇಖಿಸಿದೆ.
Advertisement
ಒಂದೊಮ್ಮೆ ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದರೆ ಆ ವ್ಯಾಪ್ತಿಯ ಪೊಲೀಸ್ ಠಾಣಾಧಿಕಾರಿಗಳೇ ಹೊಣೆ ಮಾಡಲಾಗಿದೆ. ನ್ಯಾಯಾಲಯದ ಆದೇಶ ಉಲ್ಲಂಘನೆಯ ತಪ್ಪಿತಸ್ಥರೆಂದು ಪೊಲೀಸರನ್ನು ಗುರಿ ಮಾಡಲಾಗುವುದು ಎನ್ನುವ ಆದೇಶದಲ್ಲಿ ಸೂಚನೆ ನೀಡಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv