ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಿಡ್ನಾಪುರ ಪಟ್ಟಣದ ಎಕಾರುಖಿ ಗ್ರಾಮದಲ್ಲಿ ಅಪರೂಪದ ಎರಡು ತಲೆಯ ಕಪ್ಪು ನಾಗರ ಹಾವೊಂದು ಪತ್ತೆಯಾಗಿದ್ದು, ಜನರನ್ನು ಅಚ್ಚರಿಗೊಳಿದೆ.
ಎಕಾರುಖಿ ಗ್ರಾಮ ಬೆಲ್ಡಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಈ ಅಪರೂಪದ ಎರಡು ತಲೆಯ ಹಾವನ್ನು ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಇದು ದೇವರ ಸ್ವರೂಪ ಎಂದು ನಂಬಿಕೊಂಡು ಇದನ್ನು ಅರಣ್ಯ ಇಲಾಖೆ ಒಪ್ಪಿಸಲು ಗ್ರಾಮಸ್ಥರು ನಿರಾಕರಿಸಿದ್ದಾರೆ. ಆದರೆ ಸರಿಸೃಪ ತಜ್ಞರು ಹಾಗೂ ಪ್ರಾಣಿಶಾಸ್ತ್ರಜ್ಞರು ಈ ಹಾವು ದೇವರ ರೂಪವಲ್ಲ, ಜೈವಿಕ ಸಮಸ್ಯೆಯಿಂದ ಹೀಗೆ ಜನಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಸರಿಸೃಪ ತಜ್ಞ ಕೌಸ್ತವ್ ಚಕ್ರವರ್ತಿ ಅವರು, ಈ ರೀತಿ ಎರಡು ತಲೆಯ ಹಾವು ಕಾಣಿಕೊಳ್ಳುವುದು ಅಪರೂಪ. ಕೆಲ ಜೈವಿಕ ಸಮಸ್ಯೆ, ವ್ಯತ್ಯಾಸದಿಂದ ಈ ಹಾವು ಎರಡು ತಲೆಯೊಂದಿಗೆ ಹುಟ್ಟಿದೆ. ಜೈವಿಕ ಸಮಸ್ಯೆಯಿಂದ ಎರಡು ತಲೆಯೊಂದಿಗೆ ಹೇಗೆ ಶಿಶುಗಳು ಜನಿಸುತ್ತವೊ ಅದೇ ರೀತಿ ಈ ಹಾವು ಕೂಡ ಜನಿಸಿದೆ ಅಷ್ಟೇ. ಇದು ದೇವರ ಸ್ವರೂಪವಲ್ಲ ಎಂದು ಹೇಳಿದ್ದಾರೆ.
Advertisement
Advertisement
ಎರಡು ತಲೆಯ ಹಾವು ನಾಜಾ ಕೌಟಿಯಾ ಜಾತಿಗೆ ಸೇರಿದ್ದು, ಇದನ್ನು ಬಂಗಾಳ ಖಾರೀಸ್, ಕಾಲಾ ನಾಗ ಎಂದು ಕರೆಯಲಾಗುತ್ತದೆ. ಈ ರೀತಿ ಅಪರೂಪದ ಜೀವಿಗಳನ್ನು ಹೇಗೆ ಸಂರಕ್ಷಣೆ ಮಾಡುತ್ತೇವೆ ಅದರ ಆಧಾರದ ಮೇಲೆ ಇವುಗಳು ಬದಕುತ್ತವೆ. ಈ ಹಾವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿದರೆ ಇದರ ಆಯಸ್ಸನ್ನು ಹೆಚ್ಚಿಸಬಹುದು ಎಂದು ಕೌಸ್ತವ್ ತಿಳಿಸಿದ್ದಾರೆ.
West Bengal: A two-headed snake found in the Ekarukhi village of Belda forest range. (10.12.19) pic.twitter.com/jLD4mPWhv8
— ANI (@ANI) December 10, 2019
ಗರ್ಭಾವಸ್ಥೆಯಲ್ಲಿ ಭ್ರೂಣಗಳು ಬೇರ್ಪಡುವ ಸಮಯದಲ್ಲಿ ಸಮಸ್ಯೆಯಾದಾಗ ಅಥವಾ ನೈಸರ್ಗಿಕ ಬದಲಾವಣೆಯಾದಾಗ ಈ ರೀತಿ ಎರಡು ತಲೆ ಹಾವುಗಳು ಜನಿಸುತ್ತದೆ. ಇದರಲ್ಲಿ ಯಾವುದೇ ದೈವತ್ವವಿಲ್ಲ ಎಂದು ಸರಿಸೃಪ ತಜ್ಞರು ಹಾಗೂ ಪ್ರಾಣಿಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ.