ಮುಂಬೈ: 17 ವರ್ಷದ ಇಬ್ಬರು ಹುಡುಗಿಯರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ಮುಂಬೈನ ಅರ್ರೆ ಕಾಲೋನಿಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಹುಡುಗಿಯರಿಬ್ಬರು ಬಾವಿಯ ಎದುರು ಸೆಲ್ಫಿ ತೆಗೆದುಕೊಂಡು ನಂತರ ಆ ಫೋಟೋವನ್ನು ಇಬ್ಬರೂ ತಮ್ಮ ತಮ್ಮ ವಾಟ್ಸಾಪ್ ಡಿಪಿ ಹಾಕಿ ಬಳಿಕ ಅದೇ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಹುಡುಗಿಯರ ಚಪ್ಪಲಿ, ಕಾಲು ಚೈನ್ ಹಾಗೂ ಮೊಬೈಲ್ ಫೋನ್ ಬಾವಿ ಪಕ್ಕ ದೊರೆತಿದೆ. ಹೀಗಾಗಿ ಇವುಗಳನ್ನು ತೆಗೆದಿಟ್ಟು ಹುಡುಗಿಯರಿಬ್ಬರು ಬಾವಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತ ಪೊಲೀಸರು ಶಂಕಿಸಿದ್ದಾರೆ.
Advertisement
ಬಾವಿಯ ಅಕ್ಕಪಕ್ಕ ಯಾವುದೇ ರೀತಿಯ ಡೆತ್ ನೋಟ್ ದೊರೆತಿಲ್ಲ. ಹೀಗಾಗಿ ಯಾವ ಕಾರಣಕ್ಕಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ.
Advertisement
ಮೀನಾಕ್ಷಿ ಹಾಗೂ ಸೋನಾಲಿ(ಹೆಸರು ಬದಲಾಯಿಸಲಾಗಿದೆ) ಇಬ್ಬರೂ ಬುಡಗಟ್ಟು ಜನಾಂಗದ ಸಣ್ಣ ಹಳ್ಳಿಯ ನಿವಾಸಿಗಳು. ಇವರ ಹೆತ್ತವರು ಭತ್ತದ ಕೃಷಿ ಮಾಡುತ್ತಿದ್ದಾರೆ. ಮೀನಾಕ್ಷಿ ಪಿಯುಸಿ ಓದಿದ್ರೆ, ಸೋನಾಲಿ 10ನೇ ಕ್ಲಾಸಿಗೆ ತನ್ನ ವಿದ್ಯಾಭ್ಯಾಸವನ್ನು ಕೊನೆ ಮಾಡಿದ್ದು, ಟೈಲರಿಂಗ್ ವೃತ್ತಿ ಮಾಡುತ್ತಿದ್ದಳು. ಇವರಿಬ್ಬರೂ ಮಂಗಳವಾರ ಮಧ್ಯಾಹ್ನದ ನಂತರ ತಮ್ಮ ಹೆತ್ತವರಿಗೆ ತಿಳಿಸದೆ ಮನೆಯಿಂದ ಹೊರಬಂದಿದ್ದರು.
ಅಂದೇ ಸಂಜೆ 4 ಗಂಟೆ ಸುಮಾರಿಗೆ ಪರಿಚಯಸ್ಥ ಯುವಕನೊಬ್ಬ ಹುಡುಗಿಯರಿಬ್ಬರೂ ಬಾವಿ ಹತ್ತಿರ ಇರುವುದನ್ನು ನೋಡಿದ್ದಾನೆ. ಅಲ್ಲದೇ ನಾವಿಬ್ಬರು ಬಾವಿ ಪಕ್ಕ ಇರುವುದನ್ನು ಯಾರಿಗೂ ತಿಳಿಸಬೇಡ ಅಂತ ಅವರು ಯುವಕನ ಬಳಿ ಹೇಳಿರುವುದಾಗಿ ಘಟನೆಯ ಬಳಿಕ ಸೋನಾಲಿ ತಂದೆ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹುಡುಗಿಯರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸ್ನೇಹಿತನೊಬ್ಬನಿಗೆ ಕರೆ ಮಾಡಿ ತಾವು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಆತ ಕೆಲಸದಲ್ಲಿದ್ದ ನನ್ನ ಮಗನಿಗೆ ಮಾಹಿತಿ ನೀಡಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆಯೇ ನನ್ನ ಮಗ ಬಾವಿ ಬಳಿ ಓಡಿದ್ದಾನೆ. ಆದ್ರೆ ಅದಾಗಲೇ ಹುಡುಗಿಯರಿಬ್ಬರೂ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಾತ್ರಿ 11.30ರ ಸುಮಾರಿಗೆ ಮೃತದೇಹಗಳನ್ನು ಹೊರತೆಗೆದಿದ್ದಾರೆ ಅಂತ ಅವರು ವಿವರಿಸಿದ್ರು.
ಮೃತ ಹುಡುಗಿಯರಿಬ್ಬರೂ ಚೆನ್ನಾಗಿಯೇ ಇದ್ದರು. ಯಾವುದೇ ರೀತಿಯ ಮಾನಸಿಕ ಖಿನ್ನತೆಗೆ ಒಳಗೊಂಡಿರಲಿಲ್ಲ. ಅಲ್ಲದೇ ತಾವು ಈ ರೀತಿಯ ಸಮಸ್ಯೆಯಿಂದ ಬಳಲಿದ್ದೇವೆ ಅಂತ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಹೀಗಾಗಿ ಅವರಲ್ಲಿ ಯಾವುದೇ ರೀತಿಯ ಸಮಸ್ಯೆಗಳಿರಲಿಲ್ಲ. ಆದ್ರೆ ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿಲ್ಲ.
ಸೋಮವಾರ ರಾತ್ರಿ ನಾನು ಟಿವಿಯಲ್ಲಿ ನೋಡಿದಂತಹ 5 ರೀತಿಯ ಬಟ್ಟೆ ನನಗೆ ಬೇಕು ಅಂತ ಕೇಳಿದ್ದಳು. ಈ ವೇಳೆ ಅವುಗಳನ್ನು ತೆಗೆದುಕೊಡುವುದಾಗಿ ನಾನು ಪ್ರಾಮಿಸ್ ಮಾಡಿದ್ದು, ಆರ್ಡರ್ ಕೂಡ ಮಾಡಲಾಗಿದೆ. ಇನ್ನು ಕೆಲವೇ ದಿನಗಳನ್ನು ಆ ಬಟ್ಟೆಗಳು ಮನೆಗೆ ಬರುತ್ತವೆ. ಆದ್ರೆ ಅವುಗಳನ್ನು ಧರಿಸಲು ನನ್ನ ಮಗಳೇ ನಮ್ಮೊಂದಿಗಿಲ್ಲ ಅಂತ ಸೋನಾಲಿ ತಂದೆ ಕಣ್ಣೀರು ಹಾಕಿದ್ದಾರೆ.
ಆತ್ಮಹತ್ಯೆಗೂ ಮುನ್ನ ಹುಡುಗಿಯರಿಬ್ಬರು ತಮ್ಮ ವಾಟ್ಸಪ್ ಮೆಸೇಜ್ ಗಳನ್ನೆಲ್ಲ ಡಿಲೀಟ್ ಮಾಡಿದ್ದಾರೆ. ಇದರಲ್ಲಿ ಓರ್ವಳು, ನಾನು ಬೇರೊಬ್ಬನನ್ನು ನೋಡುತ್ತಿರುವುದಾಗಿ ತನ್ನ ಗೆಳೆಯನ ಜೊತೆ ಹೇಳಿದ್ದಳು. ಸದ್ಯ ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv