ಮುಂಬೈ: ತನ್ನ ಒಬ್ಬನೇ ಬಾಯ್‌ಫ್ರೆಂಡ್‌ಗಾಗಿ 17 ವರ್ಷದ ಇಬ್ಬರು ಹುಡುಗಿಯರು ಬಸ್ ನಿಲ್ದಾಣದಲ್ಲೇ ಸಾರ್ವಜನಿಕವಾಗಿ ಹೊಡೆದಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯಲ್ಲಿ ನಡೆದಿದೆ.
ಒಬ್ಬಳು ಹುಡುಗಿ ಬಸ್ ನಿಲ್ದಾಣಕ್ಕೆ ಬಂದಿದ್ದಳು. ಇದೇ ವೇಳೆ ತನ್ನ ಬಾಯ್‌ಫ್ರೆಂಡ್ ಮತ್ತೊಬ್ಬ ಹುಡುಗಿಯೊಂದಿಗೆ ಇರುವ ವಿಷಯ ತಿಳಿದು ಅದೇ ಮತ್ತೊಬ್ಬಳು ಕೂಡ ಸ್ಥಳಕ್ಕೆ ಬಂದಿದ್ದಾಳೆ. ಇಬ್ಬರು ಹುಡುಗಿಯರ ನಡುವೆ ಬಾಯ್‌ಫ್ರೆಂಡ್‌ಗಾಗಿ ಮಾತಿನ ಚಕಮಕಿ ನಡೆಯುತ್ತಾ, ಬಳಿಕ ವಿವಾದಕ್ಕೆ ತಿರುಗಿದೆ. ನಂತರ ಹೊಡೆದಾಡಿಕೊಳ್ಳಲು ಶುರು ಮಾಡಿದ್ದಾರೆ. ಇದನ್ನೂ ಓದಿ: ರೈಲಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಪೊಲೀಸ್ ಠಾಣೆಯ ಸಮೀಪದಲ್ಲೇ ಸಾಮೂಹಿಕ ಅತ್ಯಾಚಾರ
ಇಬ್ಬರು ಹೊಡೆದಾಡುತ್ತಿರುವುದನ್ನು ಕಂಡು ಹುಡುಗ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಅಂತಿಮವಾಗಿ ಹುಡುಗಿಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ಮಾಡಿ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.