ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಬಿರನಕಲ್ ಗ್ರಾಮದಲ್ಲಿ ನೀರು ಕುಡಿಯಲು ಹೋದ ಬಾಲಕಿಯರಿಬ್ಬರು ಸಾವನಪ್ಪಿದ ದಾರುಣ ಘಟನೆ ನಡೆದಿದೆ.
ಶರಣಮ್ಮ (10) ಹಾಗೂ ನಾಗಮ್ಮ (11) ಮೃತ ದುರ್ದೈವಿ ಬಾಲಕಿಯರು. ಬಿರನಕಲ್ ಗ್ರಾಮದ ಹೊರ ಭಾಗದಲ್ಲಿ ಬಾಲಕಿಯರು ನೀರು ಕುಡಿಯಲು ಹೊಲದಲ್ಲಿನ ಕೃಷಿ ಹೊಂಡಕ್ಕಿಳಿದಾಗ ಕಾಲು ಜಾರಿ ಬಿದ್ದು ಈ ಅವಘಡ ಸಂಭವಿಸಿದೆ. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಇತ್ತ ಬಾಗಲಕೋಟೆಯ ಮುಧೋಳ ನಗರದ ಹೌಸಿಂಗ್ ಕಾಲೋನಿಯಲ್ಲಿ ಜೆಸಿಬಿ ಹರಿದು 1 ವರ್ಷ 4 ತಿಂಗಳ ಕೀರ್ತಿ ಎಂಬಾಕೆ ಸಾವನ್ನಪ್ಪಿದ್ದಾಳೆ. ಈಕೆ ನಗರದ ಪರಮಾನಂದ್ ಸೈದಾಪುರ ಅವರ ಪುತ್ರಿ. ಬಿಸಿಲಿನ ಝಳಕ್ಕೆ ಮರದ ಕೆಳಗೆ ಮಲಗಿಸಿದ್ದ ಸಂದರ್ಭದಲ್ಲಿ ಮಗುವಿನ ಮೇಲೆ ಜೆಸಿಬಿ ಹರಿದು ಈ ಅವಘಡ ಸಂಭವಿಸಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.