ಹರಿಯಾಣದಲ್ಲಿ ಬುಲ್ಡೋಜರ್ ಸೌಂಡ್ ಜೋರು – 3ನೇ ದಿನ 50-60 ಮಳಿಗೆಗಳು ಧ್ವಂಸ, 202 ಕೇಸ್ ದಾಖಲು

Public TV
1 Min Read
Haryana 4

ಚಂಡೀಗಢ: ಕೋಮು ಸಂಘರ್ಷಕ್ಕೆ ಹರಿಯಾಣದಲ್ಲಿ (Haryan) ತತ್ತರಿಸಿದೆ. ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿದ್ದು, ಕರ್ಫ್ಯೂ ಲೆಕ್ಕಿಸದೇ ಉಭಯ ಕೋಮುಗಳು ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಶನಿವಾರವೂ ಅಲ್ಲಲ್ಲಿ ಮಳಿಗೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಸತತ 3ನೇ ದಿನ ಹರಿಯಾಣದಲ್ಲಿ ಬುಲ್ಡೋಜರ್‌ (Bulldozer) ಕಾರ್ಯಾಚರಣೆ ನಡೆದಿದೆ.

ಇನ್ನೂ ಹರಿಯಾಣದಲ್ಲಿ ನಡೆದ ಕೋಮು ಗಲಭೆ ಪ್ರಕರಣದ ಆರೋಪಿಗಳಿಗೆ ಅಲ್ಲಿನ ಸರ್ಕಾರ ಕೂಡ ಬುಲ್ಡೋಜರ್ ಶಾಕ್ ನೀಡಿದೆ. ಸತತ 3ನೇ ದಿನವೂ ಭರ್ಜರಿ ಕಾರ್ಯಾಚರಣೆ ಮುಂದುವರಿಸಿದೆ. ಹಿಂಸಾಚಾರಪೀಡಿತ ನೂಹ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ತೌರುದಲ್ಲಿ ವಾಸಿಸುತ್ತಿರುವ ವಲಸಿಗರ ಗುಡಿಸಲುಗಳನ್ನ ಬುಲ್ಡೋಜರ್ ಬಳಸಿ ಹರಿಯಾಣ ಸರ್ಕಾರ ಗುರುವಾರ ನೆಲಸಮಗೊಳಿಸಿದೆ. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ

ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ 24 ಮೆಡಿಕಲ್ ಸ್ಟೋರ್‌ಗಳು ಸೇರಿದಂತೆ 50-60 ಮಳಿಗೆಗಳನ್ನ ಧ್ವಂಸಗೊಳಿಸಲಾಗಿದೆ. ಶುಕ್ರವಾರ ಸುಮಾರು ಒಂದು ಎಕರೆ ಜಮೀನಿನಲ್ಲಿ ಅಕ್ರಮ ವಲಸಿಗರು ನಿರ್ಮಿಸಿಕೊಂಡಿದ್ದ 250ಕ್ಕೂ ಅಧಿಕ ಗುಡಿಸಲುಗಳನ್ನ ಕೆಡವಲಾಗಿತ್ತು. ಇದನ್ನೂ ಓದಿ: ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

ಇನ್ನೂ ಹರಿಯಾಣದಲ್ಲಿ ಈವರೆಗೆ ಒಟ್ಟು 102 ಕೇಸ್‌ಗಳು ದಾಖಲಾಗಿದ್ದು, 202 ಮಂದಿಯನ್ನ ಬಂಧಿಸಲಾಗಿದೆ. 80 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ. ಘಟನೆ ಹಿಂದೆ ಯಾವುದೇ ಮಾಸ್ಟರ್ ಮೈಂಡಗ್ ಪತ್ತೆಯಾಗಿಲ್ಲ ಎಂದು ನುಹ್ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರ ಸಂಬಂಧ ಪರಸ್ಪರ ಕೆಸರೆರಚಾಟಗಳು ನಡೆಯುತ್ತಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article