ಬೆಂಗಳೂರು: ಕರಗದ ಪಲ್ಲಕ್ಕಿ ಉತ್ಸವದ ವೇಳೆ ವಿದ್ಯುತ್ ಶಾಕ್‍ಗೆ (Electrical Accident) ಇಬ್ಬರು ಬಲಿಯಾದ ದುರ್ಘಟನೆ ಎಲೆಕ್ಟ್ರಾನಿಕ್ ಸಿಟಿಯಯ (Electronic City )ಅಗ್ನಿಶಾಮಕ ಠಾಣೆ ಬಳಿ ನಡೆದಿದೆ.
ಮೃತ ಯುವಕರನ್ನು ಜಿಗಣಿಯ ಯಾರಂಡಹಳ್ಳಿ ಹರಿಬಾಬು (25) ಹಾಗೂ ವೀರಸಂದ್ರದ ರಂಗನಾಥ್ (30) ಎಂದು ಗುರುತಿಸಲಾಗಿದೆ. ಹೆಬ್ಬಗೋಡಿ (Hebbagodi) ಸಮೀಪದ ಗೊಲ್ಲಹಳ್ಳಿಯಲ್ಲಿ ಶನಿವಾರ ರಾತ್ರಿ ಕರಗ ಉತ್ಸವ ನಡೆದಿತ್ತು. ರಾತ್ರಿ ಕರಗ ಉತ್ಸವಕ್ಕೆ ಆಗಮಿಸಿದ್ದ ಪಲ್ಲಕ್ಕಿಗಳು, ಇಂದು ಬೆಳಗ್ಗೆ (ಭಾನುವಾರ) ಕರಗ ಉತ್ಸವ ಮುಗಿಸಿಕೊಂಡು ವಾಪಸ್ ಆಗುತ್ತಿದ್ದಾಗ ಈ ಅವಘಡ ನಡೆದಿದೆ. ಇದನ್ನೂ ಓದಿ: ಮುಂಬೈನಿಂದ ಬಂದಿದ್ದ ಬಾಲಕಿಯರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವು
ಪಲ್ಲಕ್ಕಿ ಇದ್ದ ಟ್ರ್ಯಾಕ್ಟರ್ ಸಾಗುವ ಮಾರ್ಗ ಮಧ್ಯದಲ್ಲಿದ್ದ ವಿದ್ಯುತ್ ತಂತಿಯನ್ನು ಮರದ ಕೋಲಿನಿಂದ ಯುವಕರು ಮೇಲೆತ್ತಿದ್ದಾರೆ. ಮಳೆ ಬಂದಿದ್ದರಿಂದ ಕೋಲು ಒದ್ದೆಯಾಗಿದ್ದು, ವಿದ್ಯುತ್ ಹರಿದಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಈ ವೇಳೆ ಟ್ರ್ಯಾಕ್ಟರ್ ಹೊತ್ತಿ ಉರಿದಿದ್ದು, ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಾಯ್ಲರ್ ರಿಪೇರಿ ವೇಳೆ ಹೊರಬಂದ ಬಿಸಿ ಗಾಳಿ – ಸುಟ್ಟು ಕರಕಲಾದ ಯುವಕ