ಬರ್ಲಿನ್: ಜರ್ಮನಿಯ ಮ್ಯಾಗ್ಡೆಬರ್ಗ್‌ನ ಕ್ರಿಸ್‍ಮಸ್ ಮಾರುಕಟ್ಟೆಯಲ್ಲಿ (German Christmas Market) ಜನರ ಗುಂಪಿನ ಮೇಲೆ ಕಾರೊಂದು ನುಗ್ಗಿದ (Car Attack_ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೊಂದು ಉದ್ದೇಶಪೂರ್ವಕ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿ ನಡೆಸಿದ ಕಾರು ಚಾಲಕ 50 ವರ್ಷ ವಯಸ್ಸಿನ ವೈದ್ಯನಾಗಿದ್ದು, ಈತ ಮೂಲತಃ ಸೌದಿ ಅರೇಬಿಯಾದವನು (Saudi Man) ಎನ್ನಲಾಗಿದೆ. ಜರ್ಮನಿಯ ಕಾಯಂ ನಿವಾಸಿ ಕಾರ್ಡ್ ಪಡೆದಿದ್ದ. ಸದ್ಯ ಘಟನೆ ಬಳಿಕ ಈತನನ್ನ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಉಕ್ರೇನ್ ಯುದ್ಧ ಸಂಬಂಧ ಟ್ರಂಪ್ ಜೊತೆ ಮಾತುಕತೆಗೆ ಸಿದ್ಧ: ಪುಟಿನ್
ಸದ್ಯಕ್ಕೆ ಆತನೊಬ್ಬನೇ ದಾಳಿಕೋರ ಎಂದು ನಂಬಲಾಗಿದೆ. ನಮಗೆ ತಿಳಿದಂತೆ ಸದ್ಯದಲ್ಲಿ ನಗರಕ್ಕೆ ಬೇರೆ ಯಾವುದೇ ಅಪಾಯ ಇಲ್ಲ ಎಂದು ಸ್ಯಾಕ್ಸೋನಿ-ಅನ್ಹಾಲ್ಟ್ ಗವರ್ನರ್ ರೀನರ್ ಹಸ್ಲೋಫ್ ಸ್ಪಷ್ಟಪಡಿಸಿದ್ದಾರೆ. ಈ ಭಯಾನಕ ದುರಂತದಲ್ಲಿ ಹಲವರು ಸಂತ್ರಸ್ತರಾಗಿದ್ದಾರೆ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ಕಪ್ಪು ಕಾರೊಂದು ಜನದಟ್ಟಣೆಯಿದ್ದ ಕಡೆಗೆ ರಭಸದಿಂದ ನುಗ್ಗಿದೆ. ಭಯಭೀತರಾದ ಜನತೆ ಅಡ್ಡಾದಿಡ್ಡಿಯಾಗಿ ಓಡಿಸಿದ ಪರಿಣಾಮ ದುರಂತ ಸಂಭವಿಸಿರುವುದು ಕಂಡುಬಂದಿದೆ. ಇಡೀ ಘಟನಾವಳಿಯ ವಿಡಿಯೋವನ್ನು ನಾಗರಿಕರೊಬ್ಬರು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ – ಮುಂದಿನ ವರ್ಷದಿಂದಲೇ ಎಲ್ಲಾ ನಾಗರಿಕರಿಗೂ ಫ್ರೀ!
ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಅಂಬುಲೆನ್ಸ್‌ಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಟ್ರೆಚರ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್ ಸಂದೇಶ