ಕೆಮಿಕಲ್ಸ್ ಫ್ಯಾಕ್ಟರಿ ಸ್ಫೋಟ – 2 ಸಾವು, 15 ಮಂದಿಗೆ ಗಾಯ

Public TV
1 Min Read
Fire

ಗಾಂಧಿನಗರ: ಗುಜರಾತ್‍ನ ಪಂಚಮಹಲ್ ಜಿಲ್ಲೆಯ ಗುಜರಾತ್‍ ಫ್ಲೋರೋ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಸಾವನ್ನಪ್ಪಿದ್ದಾರೆ.

FotoJet 5 7

ಈ ಕುರಿತಂತೆ ಪ್ರತಿಕ್ರಿಯಿಸಿರುವ ಪಂಚಮಹಲ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್, ಘೋಘ ತಾಲೂಕಿನ ರಂಜಿತ್‍ನಗರ ಗ್ರಾಮದ ಬಳಿ ಇರುವ ಗುಜರಾತ್ ಫ್ಲೋರೋ ಕೆಮಿಕಲ್ಸ್ ಲಿಮಿಟೆಡ್‍ನ (ಜಿಎಫ್‍ಎಲ್) ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸದ್ದು ಹಲವಾರು ಕಿಲೋಮೀಟರ್ ದೂರದಷ್ಟು ಕೇಳಿಸಿದೆ. ಇದನ್ನೂ ಓದಿ: ಒಬ್ಬ ಕ್ರಿಮಿನಲ್‍ನ ರಕ್ಷಿಸುತ್ತಿದ್ದೀರಾ – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

ಘಟನೆಯಲ್ಲಿ ಸುಮಾರು 15 ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅದರಲ್ಲಿಯೂ ಕೆಲವರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿವೆ. ಇದೀಗ ಕಾರ್ಖಾನೆಯಲ್ಲಿ ರಕ್ಷಣಾ ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆದ್ದಾರಿಯಲ್ಲೇ ಹೊತ್ತಿ ಉರಿದ 22 ಮಂದಿ ಪ್ರಯಾಣಿಕರಿದ್ದ ಬಸ್!

Share This Article