Connect with us

2 ದಿನಗಳ ಹಿಂದೆ ಸಿನಿಮಾ ಡಬ್ಬಿಂಗ್ ಮಾಡಿದ್ರು, ಗುಣಮುಖರಾಗುತ್ತಿದ್ರು: ಕಾಶಿನಾಥ್ ಸಹೋದರಿ ಗಾಯತ್ರಿ

2 ದಿನಗಳ ಹಿಂದೆ ಸಿನಿಮಾ ಡಬ್ಬಿಂಗ್ ಮಾಡಿದ್ರು, ಗುಣಮುಖರಾಗುತ್ತಿದ್ರು: ಕಾಶಿನಾಥ್ ಸಹೋದರಿ ಗಾಯತ್ರಿ

ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದು, 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

ಎರಡು ದಿನಗಳ ಹಿಂದೆ ಸಿನಿಮಾದ ಡಬ್ಬಿಂಗ್ ಸಹ ಮಾಡಿದ್ದರು. ಉಸಿರಾಟದ ತೊಂದರೆಯಾಗಿ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿಸಲಾಗಿತ್ತು, ಗುಣಮುಖರಾಗುತ್ತಿದ್ದರು. ಆದರೆ ಇಂದು ಬೆಳಗ್ಗೆ 7:15ಕ್ಕೆ ತೀವ್ರ ಉಸಿರಾಟದ ತೊಂದರೆಯಾಗಿ ಅಸುನೀಗಿದ್ದಾರೆ. ದುಬೈನಿಂದ ಕಾಶಿನಾಥ್ ಅವರ ಮಗಳು ಹೊರಟಿದ್ದಾರೆ, ಸಂಜೆ 4ಕ್ಕೆ ಬೆಂಗಳೂರಿಗೆ ಬರುತ್ತಾರೆ. ಬಂದ ನಂತರ ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಕಾಶಿನಾಥ್ ಸಹೋದರಿ ಗಾಯತ್ರಿ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕಾಶಿನಾಥ್ ತಾಯಿ ಸಾವನ್ನಪ್ಪಿದ್ದರು. ತಾಯಿ ಸಾವು ಕಾಶಿನಾಥ್ ಅವರನ್ನ ಬಹುವಾಗಿ ಕಾಡಿತ್ತು. ತಾಯಿ ಜೊತೆ ತುಂಬಾ ಅಟಾಚ್‍ಮೆಂಟ್ ಇತ್ತು. ಅವರ ಸಾವಿನಿಂದ ಇವರು ಇನ್ನಷ್ಟು ಕುಗ್ಗಿದ್ದರು. ಆರೋಗ್ಯದ ಬಗ್ಗೆ ಯಾರಿಗೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಗಾಯತ್ರಿ ಹೇಳಿದ್ರು.

ಇದನ್ನೂ ಓದಿ: ಈ ಸುದ್ದಿ ಸುಳ್ಳಾಗಲಿ ಎಂದು ಬಯಸುತ್ತೇನೆ- ಕಾಶಿನಾಥ್ ಅಗಲಿಕೆಯ ಸುದ್ದಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ನಟಿ ಅಭಿನಯ

ಇದನ್ನೂ ಓದಿ: ಬಹುತೇಕ ಸ್ಟಾರ್‍ ಗಳಿಗೆ ಸೈಡ್ ಹೊಡೆದು ಗಾಬರಿ ಹುಟ್ಟಿಸಿದ ಸಾಧಕ, ಸಂಭಾವಿತ ಕಾಶಿನಾಥ್- ನಟ ಜಗ್ಗೇಶ್ ಸಂತಾಪ

 

Advertisement
Advertisement