DistrictsKalaburagiKarnatakaLatestMain Post

ಕಲಬುರಗಿಯಲ್ಲಿ ನಾಳೆಯಿಂದ 2 ದಿನ ಬಿಜೆಪಿ ಕೋರ್ ಕಮಿಟಿ ಸಭೆ – ಸಿಎಂ ಸೇರಿ ಹಲವರು ಭಾಗಿ

ಕಲಬುರಗಿ: ನಾಳೆಯಿಂದ ಎರಡು ದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಲಬುರಗಿ ವಿಭಾಗ ಮಟ್ಟದ ಪದಾಧಿಕಾರಿಗಳ ಸಂಘಟನಾ ಸಭೆ ಕರೆಯಲಾಗಿದೆ. ಈ ಮೂಲಕ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ಬಿಜೆಪಿ ಮುಂದಾಗಿದೆ. ನಾಳೆಯ ಸಭೆಗೆ ಸ್ವಾಗತ ಕಮಾನ್‍ಗಳು ರಾರಾಜಿಸುತ್ತಿವೆ.

ಸೇಡಂ ರಸ್ತೆಯಲ್ಲಿರುವ ಗೀತಾನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಾಳೆ ಮಧ್ಯಾಹ್ನ 2 ಗಂಟೆಯಿಂದ ಕೋರ್ ಕಮಿಟಿ ಪ್ರಾರಂಭಗೊಳ್ಳಿಸಲಾಗಿದೆ. ಇವರ ನೇತೃತ್ವವನ್ನು ಸಿಎಂ ಬಸವರಾಜ ಬೊಮ್ಮಾಯಿ ವಹಿಸಲಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಭಗವಂತ ಖೂಭಾ ಮತ್ತು ಅಶ್ವಥ್ ನಾರಾಯಣ್, ವಿಜಯೇಂದ್ರ, ಲಕ್ಷ್ಮಣ್ ಸೌದಿ, ನಿರ್ಮಲ್‍ಕುಮಾರ್ ಸುರನ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಖ್ಯಾತ ನಿರ್ದೇಶಕ ಎನ್.ಟಿ.ರಾಮರಾವ್ ವಿಧಿವಶ

ಕಲಬುರಗಿ, ಬೀದರ್, ಯಾದಗಿರಿ, ಮೂರು ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಸಂಸದರು, ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಪಕ್ಷದ ಸಂಘಟನೆ, ಕಾರ್ಯಕರ್ತರ ಕುಂದುಕೊರತೆ ಸೇರಿ ಅನೇಕ ಮಹತ್ವದ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಹೇಳಿದ್ದಾರೆ.

ನಾಳಿನ(ಗುರುವಾರ) ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಮಧ್ಯಾಹ್ನ 2 ಗಂಟೆಗೆ ಡಿಎಆರ್ ಮೈದಾನಕ್ಕೆ ಹೇಲಿಕ್ಯಾಪ್ಟರ್ ಮೂಲಕ ಬಂದಿಳಿಯಲಿದ್ದಾರೆ. ನಂತರ ಗೀತಾ ನಗರಕ್ಕೆ ತೆರಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎರಡನೇ ದಿನ ಪಕ್ಷದ ಹಲವು ಕಾರ್ಯಕ್ರಮಗಳಲ್ಲಿಯೂ ಸಿಎಂ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಏಪ್ರಿಲ್ 28 ರಂದು ಇಸ್ರೇಲ್‍ನಲ್ಲಿ ಬಿಡುಗಡೆಯಾಗಲಿದೆ ‘ದಿ ಕಾಶ್ಮೀರ್ ಫೈಲ್ಸ್’

ನಾಯಕರ ಸ್ವಾಗತ ಕೊರಲು ನಗರದ ಹೃದಯ ಭಾಗವಾದ ಸರ್ದಾರ ಪಟೇಲ್ ವೃತ್, ವಿಧಾನಸೌದಾ ಮುಂಭಾಗ ಸೇರಿ ಹಲವಡೆ ಸ್ವಾಗತ ಕಮಾನ್‍ಗಳು ರಾರಾಜಿಸುತ್ತಿವೆ. ನಾಯಕರ ಸ್ವಾಗತ ಕೋರಿ ಹಲವಡೆ ಫ್ಲೇಕ್ಸ್‌ಗಳು, ಭಾಜಪಾ ಧ್ವಜಗಳು ಸಹ ಕಟ್ಟಲಾಗಿದೆ.

Leave a Reply

Your email address will not be published.

Back to top button