ಮಡಿಕೇರಿ: ಕೋಟಿ ಬೆಲೆ ಬಾಳುವ ಮನೆ ಈಗ ಪ್ರಕೃತಿಯ ಆಟಾಟೋಪಕ್ಕೆ ಇದೀಗ ಅದು ಇತ್ತಾ ಎಂಬ ಪ್ರಶ್ನೆ ಮೂಡುತ್ತಿದೆ. ಭಾರೀ ಬಂಗಲೆ ಇದೀಗ ನೆಲಸಮವಾಗಿದೆ. ನೋಡ್ತಾ ನೋಡ್ತಾ ನಿರಾಶ್ರಿತರ ಬದುಕು ಅತಂತ್ರವಾಗಿವೆ.
ಕೊಡಗಿನ ಪ್ರವಾಹಕ್ಕೆ ನೂರಾರೂ ಮನೆಗಳಿಗೆ ಹಾನಿ ಉಂಟಾಗಿದೆ. ಇದೇ ರೀತಿ ಸೋಮವಾರಪೇಟೆ ತಾಲೂಕಿನ ಹಟ್ಟಿಹೊಳೆ ಬಳಿ ಚಿತ್ರ ಸುಬ್ಬಯ್ಯ ಅವರಿಗೆ ಸೇರಿದ್ದ ಸುಮಾರು 2 ಕೋಟಿ ಮೌಲ್ಯದ ಮನೆ ಇದೀಗ ನೆಲಸಮಗೊಂಡು ಅಲ್ಲಿ ಮನೆ ಇತ್ತ ಎಂಬ ಪ್ರಶ್ನೆ ಮೂಡಿಸಿದೆ. ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಕೆಸರಿನಲ್ಲಿ ಹೂತು ಹೋಗಿವೆ. ಅದೇ ಗ್ರಾಮದ ಇಗ್ಗೋಡ್ಲುವಿನಲ್ಲಿ ನಾಲ್ಕು ಮನೆಗಳು ನೆಲಸಮಗೊಂಡಿವೆ. ತಲಾತಲಾಂತರಗಳಿಂದ ವಾಸವಿದ್ದ ಮನೆ ಇದೀಗ ಕೆಸರು ಗದ್ದೆಯಂತಾಗಿದ್ದು ಮನೆ ಮಾಲೀಕರು ನೋವಿನಲ್ಲಿ ದಿನದೂಡುತ್ತಿದ್ದಾರೆ.
Advertisement
Advertisement
ಕೊಡಗು ಹಿಂದೆಂದೂ ಕಾಣದ ಮಳೆ, ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. ಕಣ್ಣೇದುರೆ ಮನೆಗಳು ನೆಲಸಮಗೊಂಡಿವೆ. ಪ್ರಾಣ ಉಳಿದರೆ ಸಾಕಪ್ಪ ಅಂತಾ ಜನರು ಮನೆ ಬಿಟ್ಟು ತೆರಳಿದ್ದರು. ಆದರೆ ಪ್ರಾಣ ಉಳಿಸಿಕೊಂಡು ಮತ್ತೇ ಬಂದು ನೋಡಿದರೆ ಅಲ್ಲಿ ಮನೆಗಳೇ ಇರಲಿಲ್ಲ. ಕೊಡಗು ಜಿಲ್ಲೆಯ ರಣಭೀಕರ ಮಳೆಗೆ ಸಾವಿರಾರೂ ಮನೆಗಳು ನೆಲಸಮಗೊಂಡವು. ಪ್ರಕೃತಿಯ ಆಟಾಟೋಪಕ್ಕೆ ಬಡವ, ಶ್ರೀಮಂತ ಎಂಬ ಭೇದ ಭಾವವಿಲ್ಲದೇ ಮನೆಗಳನ್ನೆಲ್ಲ ಕೊಚ್ಚಿ ಹೋಗುವಂತೆ ಮಾಡಿತು. ಇದುವರೆಗೂ ಸುಮಾರು 800 ಮನೆಗಳು ಸಂಪೂರ್ಣ ನೆಲಸಮವಾಗಿದರೆ, 1500ಕ್ಕೂ ಹೆಚ್ಚು ಮನೆ ಭಾಗಶಃ ಬಿದ್ದು ಹೋಗಿವೆ.
Advertisement
Advertisement
ಮತ್ತೊಂದೆಡೆ ಸೋಮವಾರಪೇಟೆ ತಾಲೂಕಿನ ಮಾದಪುರ ಸಮೀಪದ ಶಿರಂಗಳ್ಳಿ ಗ್ರಾಮದ ರಸ್ತೆಗೆ ಅಡ್ಡವಾಗಿ ಬಿದ್ದ ಗುಡ್ಡದಿಂದ ಗರ್ವಲೆ ಸೂರ್ಲಬಿ ಕೋಟೆಬೇಟ್ಟ ಕಿಕ್ಕರಳಿ ರಸ್ತೆ ಸಂಪರ್ಕ ಇಲ್ಲದೇ ಕಳೆದ 15 ದಿನಗಳಿಂದ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ದ್ವಿಚಕ್ರ ವಾಹನ ಹಾಗೂ ಜೀಪ್ ಗಳು ಚಲಿಸಲು ರಸ್ತೆ ಸಂಪರ್ಕ ಅನುವು ಮಾಡಿಕೊಡಲಾಗುತ್ತದೆ ಎಂದು ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕಿನ ಅತೀ ಹೆಚ್ಚು ಮನೆಗಳು ನೆಲಸಮವಾಗಿದೆ. ಮಡಿಕೇರಿಯ ಇಂದಿರಾ ಹಾಗೂ ಚಾಮುಂಡೇಶ್ವರಿ ನಗರದ 250 ಮನೆಗಳು ಕುಸಿದಿವೆ. ಬಡಾವಣೆಯನ್ನೇ ಖಾಲಿ ಮಾಡಿರುವ ಜನರು ನೆಂಟರ ಮನೆಯತ್ತ ಮುಖ ಮಾಡಿದ್ದಾರೆ. ಜತೆಗೆ ಕಾವೇರಿ ನದಿ ಪಾತ್ರದ ಗ್ರಾಮಗಳು ಕೂಡ ಜಲಾವೃತಗೊಂಡು ವಾಸಿಸಲು ಯೋಗ್ಯವಿಲ್ಲದ ಪರಿಸ್ಥಿತಿಗೆ ತಲುಪಿದೆ. ಇನ್ನೊಂದೆಡೆ ಕುಶಾಲನಗರದ ಕಾವೇರಿ, ಕುವೆಂಪು ಬಡವಾಣೆಗಳು ನೀರು ತುಂಬಿ 50ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ. ಒಟ್ಟಾರೆಯಾಗಿ ಈ ಮಹಾಮಳೆಯಿಂದ ಇದ್ದ ಸೂರು ಕಳೆದುಕೊಂಡು ಜನ ಕಂಗಾಲಾಗಿದ್ದಾರೆ. ಹೇಗಾದರೂ ಮಾಡಿ ಸರ್ಕಾರ ಮನೆ ಮಾಡಿಕೊಂಡರೆ ಸಾಕಪ್ಪ ಅಂತಾ ಜನಗಳು ಕಾಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv