ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳನ್ನು (House) ಬಡವರಿಗೆ ಒದಗಿಸುವ ಗುರಿಯೇ ‘ಮೋದಿ ಸರ್ಕಾರದ ಗ್ಯಾರಂಟಿ’ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) 3 ಕೋಟಿ ಮನೆಗಳ ಹಂಚಿಕೆ ಗುರಿ ಸಾಧನೆ ಸಮೀಪದಲ್ಲಿದ್ದು, ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿ 2 ಕೋಟಿ ಮನೆಗಳ ಹಂಚಿಕೆ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಹೈಕಮಾಂಡ್‌ಗೆ ಸೆಡ್ಡು – ಮುದ್ದಹನುಮೇಗೌಡ ಪರ ಪ್ರಚಾರ ಆರಂಭಿಸಿದ ರಾಜಣ್ಣ
Advertisement
Advertisement
ವಿಕಸಿತ-ಪ್ರಗತಿಶೀಲ ಭಾರತಕ್ಕೆ ಪೂರಕ ಬಜೆಟ್:
ಲೋಕಸಭಾ ಚುನಾವಣೆ ಪೂರ್ವ ನಮ್ಮ ಕೇಂದ್ರ ಬಜೆಟ್ ಪ್ರಗತಿಶೀಲ ಭಾರತಕ್ಕೆ ಪೂರಕವಾಗಿದೆ ಎಂದು ಜೋಶಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಶ್ರೀಸಾಮಾನ್ಯರ ಪರವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ನಿಖಿಲ್ ಕುಮಾರಸ್ವಾಮಿ
Advertisement
2 crore houses in the next 5 years
Prime Minister @narendramodi ’s dream project which aims to provide affordable housing to the poor has renewed its goal to build 2 crore houses in the next five years.
“This is Guarantee of Modi Government”#ViksitBharatBudget pic.twitter.com/l4WURw7pjX
— Pralhad Joshi (@JoshiPralhad) February 1, 2024
Advertisement
ದೂರದೃಷ್ಟಿ ಮತ್ತು ಪರಿವರ್ತನಾಶೀಲ, ವಿಕಸಿತ ಭಾರತದ ಬಜೆಟ್ ಇದಾಗಿದೆ ಎಂದಿರುವ ಜೋಶಿ, 7 ಲಕ್ಷ ರೂ. ಆದಾಯ ಇರುವ ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಕೊಟ್ಟು ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಎಂದ ಶಾಸಕ ಶಿವರಾಜ್ ಪಾಟೀಲ್
1 ಕೋಟಿ ಮನೆಗಳಿಗೆ ಸೋಲಾರ್ ವಿದ್ಯುತ್, ಕಾರ್ಪೋರೇಟ್ ಟ್ಯಾಕ್ಸ್ ಶೇ.22ಕ್ಕೆ ಇಳಿಕೆ, ವಿಮಾನ ನಿಲ್ದಾಣ, ವಿಮಾನಗಳ ಸಂಖ್ಯೆ ಹೆಚ್ಚಳ, ಪ್ರವಾಸೋದ್ಯಮ ಅಭಿವೃದ್ಧಿ, ರೈಲ್ವೆ ಸೌಲಭ್ಯ ಹೀಗೆ ಸಮತೋಲಿತ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂಥದ್ದೇ ಡ್ರೆಸ್ ಹಾಕೊಳ್ಳಿ, ಬಟ್ಟೆ ಬಿಚ್ಚಾಕ್ಕೊಂಡು ಹೋಗಿ ಹೇಳಲ್ಲ- ದೇಗುಲಗಳಲ್ಲಿನ ಡ್ರೆಸ್ ಕೋಡ್‌ಗೆ ಸಿಎಂ ವಿರೋಧ
ಸರ್ವ ವರ್ಗದ ಅಗತ್ಯ ಆಶೋತ್ತರಗಳಿಗೆ ಸ್ಪಂದಿಸಿ, ವಿಕಸಿತ-ಪ್ರಗತಿಶೀಲ ಭಾರತದ ಬಜೆಟ್ ಪ್ರಸ್ತುತಪಡಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವಿಕಸಿತ ಭಾರತ್ ಬಜೆಟ್ – ಹಣಕಾಸು ಸಚಿವೆಗೆ ಪ್ರಧಾನಿ ಮೋದಿ ಶ್ಲಾಘನೆ