– ಫಾರೀನ್‌ಗೆ ಹೋಗಬೇಕು ಎಂದು ಕರೆದು ಅತ್ಯಾಚಾರ ಆರೋಪ
ಚಿತ್ರದುರ್ಗ: ಅಮೆರಿಕದ ಮಲ್ಟಿನ್ಯಾಷನಲ್ ಕಂಪನಿಯೊಂದರಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ಯುವತಿಯನ್ನು ನಂಬಿಸಿ, ಕೋಟಿಗಟ್ಟಲೆ ಹಣ ಪಡೆದು ವಂಚಿಸಿದ್ದಲ್ಲದೇ (Fraud), ಸತತ 4 ವರ್ಷಗಳಿಂದ ಪ್ರೀತಿಸುವ ನಾಟಕವಾಡಿ, ಅತ್ಯಾಚಾರವೆಸಗಿದ್ದಾನೆಂದು (Rape) ಆರೋಪಿಸಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ಬೆಳಕಿಗೆ ಬಂದಿದೆ.
Advertisement
ಉದ್ಯೋಗದ ಆಸೆಗೆ ಯುವಕನಿಂದ ಮೋಸ ಹೋಗಿ ನ್ಯಾಯಕ್ಕಾಗಿ ಚಿತ್ರದುರ್ಗದ ಯುವತಿ ಅಲೆದಾಡುತ್ತಿದ್ದಾರೆ. 2019 ರಲ್ಲಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಚಿತ್ರದುರ್ಗ ಮೂಲದ ಸೌರಭ್ ಎಂಬ ಯುವಕನ ಪರಿಚಯವಾಗಿದ್ದು, ಇಬ್ಬರ ಮಧ್ಯೆ ಪರಸ್ಪರ ಸ್ನೇಹ, ಆತ್ಮೀಯತೆ ಬೆಳೆದಿತ್ತು.
Advertisement
Advertisement
ಆಗ ಅಮೆರಿಕ ಸೇರಿದಂತೆ ಮತ್ತಿತರ ವಿದೇಶದ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ನಿನಗೆ ಕೆಲಸ ಕೊಡಿಸ್ತೀನಿ ಅಂತ ಯುವತಿಯನ್ನು ನಂಬಿಸಿದ್ದ ಸೌರಭ್. ಫೇಕ್ ಆಫರ್ ಲೆಟರ್ ಕೊಟ್ಟು, ಈಕೆಯಿಂದ ಉದ್ಯೋಗದ ನೆಪದಲ್ಲಿ ಕೋಟಿಗಟ್ಟಲೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿ ಕೋರ್ಟ್‌ಗೆ ಶರಣು
Advertisement
ಪ್ರತಿದಿನ ಮೊಬೈಲ್ ಸಂಭಾಷಣೆಯಲ್ಲಿ ತೊಡಗಿದ್ದ ಅಸಾಮಿ ಸಾಕಷ್ಟು ಬಾರಿ ಆಕೆಯನ್ನು ಹೊರ ದೇಶಕ್ಕೆ ಹೋಗಬೇಕು, ರೆಡಿಯಾಗಿರು ಎಂದು ಹೇಳಿ, ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಉದ್ಯೋಗವಂತು ಕೊಡಿಸಲಿಲ್ಲ, ಮದುವೆಯಾಗಿ ಬದುಕಾದರೂ ಕೊಟ್ಟು ಕರುಣೆ ತೋರು ಎಂದು ಕೇಳಿದರೂ ಸೊಪ್ಪು ಹಾಕಿಲ್ಲ. ನಮ್ಮಿಂದ ಪಡೆದ ಎರಡೂವರೆ ಕೋಟಿ ರೂ. ಹಣವಾದರೂ ವಾಪಸ್ ಕೊಟ್ಟುಬಿಡು ಎಂದು ಯುವತಿ ಹಾಗೂ ಆಕೆಯ ಕುಟುಂಬ ಅಂಗಲಾಚಿದರೂ ಸಹ ಕಿಂಚಿತ್ ಅನುಕಂಪವಿಲ್ಲದೇ ಕೊಲೆ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.
ಈ ಸಂಬಂಧ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಲ್ಲದೇ 2 ತಿಂಗಳ ಹಿಂದೆ ನೊಂದ ಯುವತಿಯ ತಂದೆ ಕೂಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಎಸ್‌ಪಿ ಧರ್ಮೇಂದರ್ ಕುಮಾರ್, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರದರ್ಶಕವಾದ ತನಿಖೆ ನಡೆಸಿ, ನೊಂದವರಿಗೆ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ದೇಶದಲ್ಲೇ ಸಿಗದಂತಹ ಗಿಫ್ಟ್ ಕೊಟ್ಟ ಕಾಫಿನಾಡ ಅಂಧ ಅಥ್ಲೀಟ್
Web Stories