ಇಸ್ಲಾಮಾಬಾದ್: ಚೀನಾ ರಾಯಭಾರಿ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸರು ಮೃತಪಟ್ಟಿರುವ ಘಟನೆ ಕರಾಚಿಯಲ್ಲಿ ನಡೆದಿದೆ.
ಶುಕ್ರವಾರ ಬೆಳಗ್ಗೆ ಮೂರರಿಂದ ನಾಲ್ಕು ಮಂದಿ ಉಗ್ರರು ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಎಚ್ಚೆತ್ತ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಮಹಮ್ಮದ್ ಶಾಹ್ ಹೇಳಿದ್ದಾರೆ.
Advertisement
Three terrorists, two policemen killed in firing near Chinese Consulate in Karachi's Clifton area: Geo News #Pakistan pic.twitter.com/52MkirKZO2
— ANI (@ANI) November 23, 2018
Advertisement
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ದಾಳಿ ವೇಳೆ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಗಾಯಾಳುಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗುಂಡಿನ ದಾಳಿಯಿಂದಾಗಿ ಇಬ್ಬರು ಪೊಲೀಸರು ಮೃತಪಟ್ಟಿರುವ ಬಗ್ಗೆ ಡಿಐಜಿ ಜಾವೆದ್ ಆಲಂ ಒಡೋ ಅವರು ದೃಢಪಡಿಸಿದ್ದಾರೆ.
Advertisement
ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್‍ಎ) ದಾಳಿಯ ಹೊಣೆ ಹೊತ್ತಿದ್ದು, ಈ ಕುರಿತು ಅಜ್ಞಾನ ಸ್ಥಳದಿಂದ ಪ್ರತಿಕ್ರಿಯಿಸಿರುವ ಬಿಎಎಲ್ ವಕ್ತಾರ, ಇಂಥಹ ಇನ್ನಷ್ಟು ದಾಳಿಗಳನ್ನು ಮುಂದುವರಿಸುತ್ತಲೇ ಇರುತ್ತೇವೆಂದು ಎಚ್ಚರಿಕೆ ನೀಡಿದ್ದಾನೆ.
Advertisement
ಮಾಹಿತಿಗಳ ಪ್ರಕಾರ ಪಾಕ್-ಚೀನಾ ಸಂಪರ್ಕಿಸುವ ಹೆದ್ದಾರಿ ಯೋಜನೆಯನ್ನು ಬಿಎಲ್‍ಎ ವಿರೋಧಿಸುತ್ತಿದೆ. ಅಲ್ಲದೇ ಬಲೂಚಿಸ್ತಾನ ಪಾಕಿಸ್ತಾನದ ಅತಿದೊಡ್ಡ ಹಾಗೂ ಅತ್ಯಂತ ಹಿಂದುಳಿದ ಪ್ರಾಂತ್ಯವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ, ಚೀನಾ ರಾಯಭಾರಿ ಕಚೇರಿಯ ಎಲ್ಲಾ ಸಿಬ್ಬಂದಿ ಕ್ಷೇಮವಾಗಿದ್ದಾರೆ. ಅವರೆಲ್ಲರನ್ನು ಹತ್ತಿರದ ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿದ್ದೇನೆ. ಈಗಾಗಲೇ ಭದ್ರತಾ ಪಡೆಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದ್ದಾರೆ.
#karachi #khialerts 09h35 video from witnesses pic.twitter.com/ONguK5Hh7P
— Norbert Almeida “bruh” (@norbalm) November 23, 2018
ಚೀನಾಕ್ಕೆ ಶಾಕ್:
ಉಗ್ರರ ವಿಚಾರ ಬಂದಾಗ ವಿಶ್ವದಲ್ಲಿ ಪಾಕಿಸ್ತಾನದ ಪರ ಬೆಂಬಲ ನೀಡುತ್ತಿರುವ ಚೀನಾಕ್ಕೆ ಈ ದಾಳಿ ಶಾಕ್ ನೀಡಿದೆ. ಸೇನಾ ನೆರವಲ್ಲದೇ ಇತರ ನೆರವುಗಳನ್ನು ಪಾಕಿಸ್ತಾನಕ್ಕೆ ಚೀನಾ ನೀಡುತ್ತಲೇ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv