ನವದೆಹಲಿ: ಪಕ್ಕದ ಮನೆಯ ಯುವತಿಯನ್ನು ಚುಡಾಯಿಸಿ, ಅಶ್ಲೀಲ ಹಾಡು ಹಾಡುತ್ತ, ವಿಚಿತ್ರ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿದ ಇಬ್ಬರು ಯುವಕರಿಗೆ ಈಗ ಜೈಲು ಸೇರುವ ಭೀತಿ ಕಾಡುತ್ತಿದೆ.
ದೆಹಲಿಯ ಚಾಂದನಿ ಚೌಕ್ ನಿವಾಸಿಗಳಾದ ಗಣೇಶ್ ಹಾಗೂ ಕೃಷ್ಣ ಕುಮಾರ್ ಇಬ್ಬರೂ ಪ್ರತಿದಿನ ಪಕ್ಕದ ಮನೆಯ ಯುವತಿಗೆ ಚುಡಾಯಿಸುತ್ತಿದ್ದರು. ಆಕೆ ಕಂಡಾಗಲೆಲ್ಲಾ ಅಶ್ಲೀಲ ಹಾಡುಗಳನ್ನು ಹೇಳುತ್ತಾ, ವಿಚಿತ್ರ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದನ್ನೂ ನೋಡಿ ನೋಡಿ ಬೇಸತ್ತ ಯುವತಿ ಹಾಗೂ ಆಕೆಯ ತಾಯಿ ಚುಡಾಯಿಸಿದ ಯುವಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
Advertisement
Advertisement
ಈ ಪ್ರಕರಣ ತೀಸ್ ಹಜಾರಿ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಯುವತಿ ಹಾಗೂ ಆಕೆಯ ತಾಯಿ ಮನೆ ಮಾರಿಕೊಂಡು ದೂರ ಹೋಗಲಿ ಎನ್ನುವ ಕಾರಣಕ್ಕೆ ಗಣೇಶ್ ಹಾಗೂ ಕೃಷ್ಣ ಈ ರೀತಿ ಯುವತಿ ಜೊತೆ ನಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಇತ್ತ ತಾಯಿ-ಮಗಳು ಕೂಡ ನಮಗೆ ಕಿರುಕುಳ ಕೊಟ್ಟಿದ್ದಾರೆ ಎಂದು ಯುವಕರು ಪ್ರತ್ಯಾರೋಪ ಮಾಡಿದ್ದರು.
Advertisement
ಆದರೆ ಈ ಸಂಬಂಧ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಯುವತಿ ಪರವಾಗಿ ತೀರ್ಪು ನೀಡಿದ್ದಾರೆ. ಕೋರ್ಟಿನಲ್ಲಿ ಯುವತಿಗೆ ಯುವಕರು ಅವಮಾನ ಮಾಡಿದ್ದಲ್ಲದೆ ಬೆದರಿಕೆ ಹಾಕಿದ ಆರೋಪ ಸಾಬೀತಾಗಿದೆ. ಹೀಗಾಗಿ ಇಬ್ಬರೂ ದೋಷಿಗಳೆಂದು ಕೋರ್ಟ್ ತೀರ್ಪು ನೀಡಿದೆ. ಅಲ್ಲದೆ ಮುಂದಿನ ತಿಂಗಳು ಈ ಇಬ್ಬರಿಗೂ ಕೋರ್ಟ್ ಶಿಕ್ಷೆಯನ್ನು ಪ್ರಕಟ ಮಾಡುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.