ಇಸ್ಲಾಮಾಬಾದ್: ಭಾರತದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಡ್ರೋನ್ ದಾಳಿಯ ಮಧ್ಯೆ ಲಾಹೋರ್ ಬಳಿ 2 ನಾಗರಿಕ ವಿಮಾನಗಳು ಕಾಣಿಸಿಕೊಂಡಿದ್ದು, ಇವುಗಳನ್ನು ಬಳಸಿಕೊಂಡು ಡ್ರೋನ್ ದಾಳಿ ನಡೆಸುತ್ತಿದೆ ಎನ್ನಲಾಗುತ್ತಿದೆ.
ಪಾಕಿಸ್ತಾನದ ಲಾಹೋರ್ ಬಳಿ ಎರಡು ನಾಗರಿಕ ವಿಮಾನಗಳು ಕಾಣಿಸಿಕೊಂಡಿದ್ದು, ಇದೇ ವೇಳೆ ಒಳನುಗ್ಗುತ್ತಿದ್ದ ಡ್ರೋನ್‌ಗಳನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದೆ.ಇದನ್ನೂ ಓದಿ: ನಾವಿರುವ ಸ್ಥಳದಲ್ಲಿ ಗುಂಡಿನ ಶಬ್ಧಗಳು ಕೇಳುತ್ತಿದೆ: ಓಮರ್ ಅಬ್ದುಲ್ಲಾ
ಇಂದು ಸರ್ಕಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಕಾರ, ಗುರುವಾರ ರಾತ್ರಿ ಪಾಕ್ ವಾಯುಪ್ರದೇಶ ಬಳಕೆ ಬಂದ್ ಮಾಡಿರಲಿಲ್ಲ ಹಾಗೂ ನಾಗರಿಕ ವಿಮಾನಯಾನ ಮಾಡಲು ಅವಕಾಶ ನೀಡಿರಲಿಲ್ಲ ಎಂದು ತಿಳಿಸಿತ್ತು, ಆದರೆ ದಾಳಿ ವೇಳೆ ಪಾಕಿಸ್ತಾನ ಭಾರತೀಯ ನಗರಗಳ ಮೇಲೆ ಟರ್ಕಿಶ್ ನಿರ್ಮಿತ ಡ್ರೋನ್‌ಗಳನ್ನು ಗುಟ್ಟಾಗಿ ಹಾರಿಸಿತ್ತು.
ಅಂತಾರಾಷ್ಟ್ರೀಯ ಗಡಿಯ ಸಮೀಪ ಪಾಕಿಸ್ತಾನ ಏರ್‌ಲೈನ್ಸ್ ವಿಮಾನ PIA 306 ಕರಾಚಿಯಿಂದ ಲಾಹೋರ್‌ಗೆ ತೆರಳುವಾಗ ಕಂಡುಬಂದರೆ, ಇನ್ನೊಂದು ವಿಮಾನ ABQ406, ರಾತ್ರಿ 10 ಗಂಟೆಗೆ ಪಾಕಿಸ್ತಾನದಲ್ಲಿ ಇಳಿಯಬೇಕಿತ್ತು. ಆದರೆ ಅದು ಕರಾಚಿಯಿಂದ ಲಾಹೋರ್‌ಗೆ ಹಾರಾಟ ನಡೆಸುವಾಗ ಕಂಡುಬಂದಿದೆ.ಇದನ್ನೂ ಓದಿ:ದೇಶದಲ್ಲಿಲ್ಲ ಆಹಾರ ಕೊರತೆ; ಜನರಿಗೆ ಬೇಕಿಲ್ಲ ಚಿಂತೆ