ಹೈದರಾಬಾದ್: ಎರಡನೇ ತರಗತಿ ಬಾಲಕ ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ತೆಲಂಗಾಣದ ಮಹಾಬುದಾಬಾದ್ ಜಿಲ್ಲೆಯ ಬಯ್ನಾವರಂನಲ್ಲಿ ನಡೆದಿದೆ.
Advertisement
ಖಾಸಗಿ ಶಾಲೆಯ 2ನೇತರಗತಿ ವಿದ್ಯಾರ್ಥಿಯೊಬ್ಬ ಧ್ಯಾನ ತರಗತಿಯಲ್ಲಿ ಇತರ ವಿದ್ಯಾರ್ಥಿಗಳಿಗೆ ಕೀಟಲೆ ನೀಡುತ್ತಿದ್ದ. ಈ ಕಾರಣಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗೆ ಬೈದಿದ್ದರು. ಇದರಿಂದ ಕೋಪಗೊಂಡು ಬಾಲಕ ಊಟದ ವಿರಾಮದ ವೇಳೆ ಮರು ಮಾತನಾಡದೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಇದನ್ನೂ ಓದಿ: ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್
Advertisement
Advertisement
*Officer…..!!*
*Teacher Kottindi…!*
2nd class student complaint ????@spmahabubabad జిల్లా
బయ్యారం మండల కేంద్రంలోని ఓ ఫ్రైవేట్ స్కూల్ లో విద్యార్థిని కొట్టిన టీచ్చర్ ..
2వ తరగతి చదువుతున్న అనిల్ అనే విద్యార్ధి.#Hyderabad pic.twitter.com/7B6pvc0ZBs
— Abhinay Deshpande (@iAbhinayD) March 5, 2022
Advertisement
ಶಾಲೆಯಿಂದ 200 ಮೀಟರ್ ದೂರದಲ್ಲಿರುವ ಠಾಣೆಯಲ್ಲಿ ಎಸ್.ಐ ಎಂ ರಮಾದೇವಿ ಬಳಿ ಶಿಕ್ಷಕನ ವಿರುದ್ಧ ಕೇಸು ದಾಖಲಿಸುವಂತೆ ಪುಟ್ಟ ಬಾಲಕ ಮನವಿ ಮಾಡಿದ್ದಾನೆ. ಕೂಡಲೇ ಶಿಕ್ಷಕರನ್ನು ಬರುವಂತೆ ಸೂಚಿಸಿದ ಎಸ್.ಐ ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ವಿದ್ಯಾರ್ಥಿಗೆ ಬುದ್ಧಿವಾದದ ಮಾತಗಳನ್ನು ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಮಾತುಕತೆಯ ಮೂಲಕ ಯುದ್ಧ ನಿಲ್ಲಿಸಿ – ಝೆಲೆನ್ಸ್ಕಿಗೆ ಮೋದಿ ಸಲಹೆ