ಪಾಟ್ನಾ: ವೀಸಾ ಇಲ್ಲದೆ ಭಾರತೀಯ ಭೂಪ್ರದೇಶಕ್ಕೆ ನುಸುಳಿದ್ದ ಇಬ್ಬರು ಚೀನಿ ಪ್ರಜೆಗಳನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ.
ದೆಹಲಿ-ಎನ್‍ಸಿಆರ್ ಪ್ರದೇಶದಲ್ಲಿ ಸುಮಾರು ಹದಿನೈದು ದಿನಗಳ ಕಾಲ ವಾಸಿಸುತ್ತಿದ್ದ ಇಬ್ಬರು ಚೀನಾದ ಪ್ರಜೆಗಳನ್ನು ಇಂಡೋ-ನೇಪಾಳ ಗಡಿ ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರನ್ನು ಬಿಹಾರದಲ್ಲಿ ಪೊಲೀಸರು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಚರಂಡಿ ವಿಷಯಕ್ಕೆ ಜಗಳ – ಯುವಕನ ಕೊಲೆ, 6 ಜನರ ಸ್ಥಿತಿ ಗಂಭೀರ
Advertisement
Advertisement
ನಡೆದ್ದಿದ್ದೇನು?
ಸೀತಾಮರ್ಹಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ಕಿಶೋರ್ ರೈ ಈ ಕುರಿತು ಮಾಹಿತಿ ತಿಳಿಸಿದ್ದು, ಲು ಲ್ಯಾಂಗ್(28) ಮತ್ತು ಯುವಾನ್ ಹೈಲಾಂಗ್(34) ಎಂದು ಗುರುತಿಸಲಾಗಿದ್ದ ವ್ಯಕ್ತಿಗಳನ್ನು ಸಶಸ್ತ್ರ ಸೀಮಾ ಬಾಲ್(SSB) ಬಂಧಿಸಿದೆ. ನಂತರ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಯಾವುದೇ ರೀತಿಯ ವೀಸಾ ಹೊಂದಿಲ್ಲದಿದ್ದರೂ, ಚೀನಾದ ಪಾಸ್‍ಪೋರ್ಟ್ ಹೊಂದಿದ್ದರು ಎಂದು ತಿಳಿಸಿದ್ದಾರೆ.
Advertisement
ಲು ಲ್ಯಾಂಗ್ ಮತ್ತು ಯುವಾನ್ ಹೈಲಾಂಗ್ ಟ್ಯಾಕ್ಸಿಯಿಂದ ಇಳಿದು ನಡೆದುಕೊಂಡು ಭಾರತ-ನೇಪಾಳ ಗಡಿ ದಾಟಲು ಯತ್ನಿಸಿದ್ದ ವೇಳೆ SSB ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ನೇಪಾಳದಾದ್ಯಂತ ಲೀಫ್ಟ್ ಕೇಳುವ ಮೂಲಕ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿದರು. ನೋಯ್ಡಾಗೆ ಹೋಗಿ ಅಲ್ಲಿ ಅವರಿಗೆ ಪರಿಚಯವಿದ್ದ ಮನೆಯಲ್ಲಿ ಇದ್ದರು ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
Advertisement
ಆರೋಪಿಗಳ ಫೋನ್ ದಾಖಲೆಗಳು ಮತ್ತು ಇತರ ವಸ್ತುಗಳ ಪರಿಶೀಲನೆ ಮಾಡಿದಾಗ ಇವರು ಹಣಕಾಸು ವಂಚನೆ ದಂಧೆಯಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಪ್ರಸ್ತುತ ಇಬ್ಬರ ವಿರುದ್ಧ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಂಗಿ ಹರಿದ ಪೊಲೀಸರು: ಪ್ರತಿಭಟನೆ ವೇಳೆ ವೇಣುಗೋಪಾಲ್ ಅಸ್ವಸ್ಥ