ಬೆಂಗಳೂರು: ತಮಿಳುನಾಡಿನ ಸಾಂಸ್ಕೃತಿಕ ಕ್ರೀಡೆ ಜಲ್ಲಿಕಟ್ಟುವಿನಲ್ಲಿ ಭಾಗವಹಿಸಿದ್ದ 2 ಹೋರಿಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು ಬಳಿ ನಡೆದಿದೆ.
ಹೊಸೂರು ಸಮೀಪದ ಉದ್ದಾನಪಲ್ಲಿ ಗ್ರಾಮದಲ್ಲಿ ಇಂದು ಅದ್ಧೂರಿಯಾಗಿ ಜಲ್ಲಿಕಟ್ಟು ಆಯೋಜಿಸಲಾಗಿತ್ತು. ಈ ವೇಳೆ ಸರ್ಧೆಯಲ್ಲಿ ಓಡುತ್ತಿದ್ದ ಹೊರಿಯನ್ನು ಹಿಡಿಯಲು ಜನರು ಮುಗಿಬಿದ್ದಿದ್ದು, ಓರ್ವ ಯುವಕನನ್ನು ಹೋರಿಯೊಂದು ಗುದ್ದಿ ಬೀಳಿಸಿದೆ. ಬಳಿಕ ವಿರುದ್ಧ ದಿಕ್ಕಿನಲ್ಲಿ ಓಡಿ ಬಂದ ಮತ್ತೊಂದು ಹೋರಿಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಎರಡು ಹೋರಿಗಳು ಸ್ಥಳದಲ್ಲೇ ಸಾವನಪ್ಪಿದೆ.
Advertisement
Advertisement
ಸಂಕ್ರಾಂತಿ ಹಬ್ಬದಿಂದ ತಮಿಳುನಾಡಿನಾದ್ಯಂತ ಪ್ರತಿನಿತ್ಯ ಒಂದಲ್ಲ ಒಂದುಕಡೆ ಜಲ್ಲಿಕಟ್ಟು ಆಯೋಜಿಸಲಾಗುತ್ತದೆ. ಬರೋಬ್ಬರಿ ಮೂರು ತಿಂಗಳ ಕಾಲ ನಡೆಯುವ ಈ ಜಲ್ಲಿಕಟ್ಟು ಕ್ರೀಡೆಯಲ್ಲಿ ಹೋರಿ ಸಾಕಿದವರು ತಮ್ಮ ಹೋರಿಗಳನ್ನು ಸಿಂಗರಿಸಿ ಓಟದಲ್ಲಿ ಬಿಡುತ್ತಾರೆ. ಆದ್ರೆ ಈ ಭಾರಿ ಹೊಸೂರು ಸುತ್ತಮುತ್ತ ನಡೆದ ಜಲ್ಲಿಕಟ್ಟುವಿನಲ್ಲಿ ಸುಮಾರು 5 ಹೋರಿಗಳು ಪರಸ್ಪರ ಡಿಕ್ಕಿಹೊಡೆದುಕೊಂಡು ಸಾವನಪ್ಪಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv