ಚಿಕ್ಕಬಳ್ಳಾಪುರ: ಆಂಜನೇಯ ದೇವರ ದರ್ಶನ ಪಡೆದು, ಪ್ರಸಾದ ತಿಂದು ಬಾಲಕರಿಬ್ಬರು ಕೈ ತೊಳೆಯಲು ಕುಂಟೆಗೆ ಹೋದವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭೈರನಾಯಕನಹಳ್ಳಿ ಗೇಟ್ ಬಳಿ ನಡೆದಿದೆ.
ಅನೂರು ಗ್ರಾಮದ ಗಾಯಿತ್ರಿ ನಟರಾಜು ದಂಪತಿಯ ಮಗನಾದ ಯಶವಂತ್(12) ಹಾಗೂ ಅನಿತಾ ಮನೋಹರ್ ದಂಪತಿ ಪುತ್ರ ಪ್ರೀತಮ್ ಗೌಡ(08) ಮೃತ ದುರ್ದೈವಿಗಳು. ದೇವಸ್ಥಾನಕ್ಕೆ ಆಗಮಿಸಿದ ಬಾಲಕರಿಬ್ಬರು ಅಲ್ಲಿ ನೀಡಿದ್ದ ಪ್ರಸಾದ ತಿಂದಿದ್ದಾರೆ. ನಂತರ ಕೈ ತೊಳೆಯಲೆಂದು ಹತ್ತಿರದ ಕುಂಟೆಗೆ ತೆರಳಿದ್ದಾರೆ. ಈ ವೇಳೆ ಬಾಲಕರಿಬ್ಬರು ಕುಂಟೆಯಲ್ಲಿ ಜಾರಿಬಿದ್ದು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ಅಲ್ಲೇ ಇದ್ದ ಇನ್ನೊಬ್ಬ ಬಾಲಕ ತಕ್ಷಣ ಗ್ರಾಮದಲ್ಲಿ ವಿಷಯ ತಿಳಿಸಿದ್ದಾನೆ.
Advertisement
ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೀರಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಪ್ರದೀಪ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
Advertisement
Advertisement