ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಲಘು ಬಾಂಬ್ ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿ ಮಾಡಿದೆ.
ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಇರುವ ಪೀಪಲ್ಸ್ ಪಾರ್ಕ್ ನಲ್ಲಿ ಎರಡು ಬಾಕ್ಸ್ ಗಳಲ್ಲಿ ಶೆಲ್ ಹಾಗೂ ವಯರ್ ತುಂಬಿದ ಬಾಕ್ಸ್ ಪತ್ತೆಯಾಗಿದೆ. ಇದನ್ನು ಕಂಡ ಸಾರ್ವಜನಿಕರು ಭಯಗೊಂಡು ಕಂಟ್ರೋಲ್ ರೂಂಗೆ ಕರೆಮಾಡಿದ್ದಾರೆ. ಇದನ್ನೂ ಓದಿ; ಬೆಳ್ಳಂಬೆಳಗ್ಗೆ ಮೈಸೂರಿನ ಜನರಲ್ಲಿ ಆತಂಕ ಮೂಡಿಸಿದ ಬಾಂಬ್ ಕರೆ
Advertisement
Advertisement
ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಪರೀಶಿಲನೆ ನಡೆಸಿದ್ದಾರೆ. ಈ ವೇಳೆ ಬಾಕ್ಸ್ ನಲ್ಲಿ ಸ್ಫೋಟಕ ವಸ್ತುಗಳಾದ ಶೆಲ್ ಹಾಗೂ ವಯರ್ ಗಳು ಪತ್ತೆಯಾಗಿವೆ. ಈ ಎಲ್ಲವನ್ನೂ ತಪಾಸಣೆ ನಡೆಸಿದ ಪೊಲೀಸರು ಬಾಕ್ಸ್ ನ್ನು ತೆಗೆದುಕೊಂಡು ಸಿಆರ್ ಗ್ರೌಂಡ್‍ನಲ್ಲಿ ಸ್ಫೋಟಕ ವಸ್ತುಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
Advertisement
2016ರ ಆಗಸ್ಟ್ ನಲ್ಲಿ ಮೈಸೂರು ಕೋರ್ಟ್ ನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ನಗರದಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.
Advertisement