ಚಂಡೀಗಢ: ಹರ್ಯಾಣ ಕಾಂಗ್ರೆಸ್ ಮುಖಂಡ ವಿಕಾಸ್ ಚೌಧರಿ ಅವರ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಓರ್ವ ಮಹಿಳೆ ಹಾಗೂ ಪುರುಷನನ್ನು ಹರ್ಯಾಣ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದ ಕುರಿತು ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಗುಂಡಿನ ದಾಳಿ ನಡೆಸಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
Advertisement
Haryana Police have arrested two people in connection with murder of Congress leader Vikas Chaudhary on 27th June. pic.twitter.com/Mvi9Rtj1VZ
— ANI (@ANI) June 29, 2019
Advertisement
ಕೊಲೆಯಾದ ವಿಕಾಸ್ ಚೌಧರಿ ಅವರು ಹರ್ಯಾಣ ಕಾಂಗ್ರೆಸ್ ವಕ್ತಾರರಾಗಿದ್ದರು. ಫರಿದಾಬಾದ್‍ನಲ್ಲಿ ಕಾರಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ವಿಕಾಸ್ ಚೌಧರಿ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದ ಚೌಧರಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ತರುವ ಮಾರ್ಗ ಮಧ್ಯದಲ್ಲಿಯೇ ವಿಕಾಸ್ ಚೌಧರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
Advertisement
ಬಿಳಿ ಬಣ್ಣದ ಮಾರುತಿ ಸುಜುಕಿ ಎಸ್‍ಎಕ್ಸ್4 ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 10ಕ್ಕೂ ಹೆಚ್ಚು ಗುಂಡು ಹಾರಿಸಿದ್ದರು. ಪರಿಣಾಮ ವಿಕಾಸ್ ಅವರ ಕುತ್ತಿಗೆ ಹಾಗೂ ಎದೆ ಭಾಗಗಕ್ಕೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು.
Advertisement
Haryana: Congress leader Vikas Chaudhary shot at in Faridabad. More details awaited. pic.twitter.com/m6Zqru6JOy
— ANI (@ANI) June 27, 2019
ಈ ಸಂಬಂಧ ತನಿಖೆ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಗಳಿಗೆ ಶೋಧ ಕಾರ್ಯ ನಡೆಸಿದ್ದರು. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದ ಪೊಲೀಸರು, ಇದೊಂದು ಪೂರ್ವಯೋಜಿತ ಹತ್ಯೆ ಎಂದು ತಿಳಿಸಿದ್ದರು.
ಮುಖಂಡ ವಿಕಾಸ್ ಚೌಧರಿ ಕೊಲೆಯನ್ನು ಖಂಡಿಸಿರುವ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವಾರ್ ಅವರು, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಬೇಕು. ತನಿಖೆಯನ್ನು ಚುರುಕುಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹರ್ಯಾಣ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.