ಚಿಕ್ಕಮಗಳೂರು: ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಲ್ವಾರ್ ಹಿಡಿದು ಓಡಾಡಿದ್ದ ಹಾಗೂ ಇನ್ಸ್ಟಾಗ್ರಾಮ್‍ನಲ್ಲಿ (Instagram) ಫೋಟೋ ಹಂಚಿಕೊಂಡಿದ್ದ ಇಬ್ಬರನ್ನು ಎನ್‍ಆರ್‌ಪುರ (NRPura) ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಎನ್‍ಆರ್‌ಪುರದ ಸೈಯದ್ ಸಲ್ಮಾನ್ (22) ಮೊಹಮ್ಮದ್ ಸಾಧಿಕ್ (25) ಎಂದು ಗುರುತಿಸಲಾಗಿದೆ. ಆರೋಪಿಗಳು ತಲ್ವಾರ್ ಹಿಡಿದು ಕಾರಿನಲ್ಲಿ ಅಡ್ಡಾಡುತ್ತಿದ್ದರು. ಇದೀಗ ಪೊಲೀಸರು ಸಿನಿಮೀಯ ರೀತಿಯಲ್ಲಿ ಸೌತಿಕೆರೆ ಗ್ರಾಮದ ಬಳಿ ಕಾರನ್ನು ಅಡ್ಡಗಟ್ಟಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸೂರಜ್ ಪ್ರಕರಣ ನಮಗೂ ಮುಜುಗರ ತಂದಿದೆ – ಚಲುವರಾಯಸ್ವಾಮಿ
ಆರೋಪಿಗಳು ಸಾರ್ವಜನಿಕ ಸ್ಥಳಗಳಲ್ಲಿ ಲಾಂಗ್ ಪ್ರದರ್ಶನ ಮಾಡಿದ್ದರು. ಈ ಸಂಬಂಧ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರು ಎನ್‍ಆರ್‌ಪುರದಲ್ಲಿ ಮೆಕಾನಿಕ್ ಆಗಿ ಕೆಲಸಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೇವಣ್ಣ ಕುಟುಂಬಕ್ಕೆ ಕಾನೂನು ಸಂಕಷ್ಟ – ಯಾರ ವಿರುದ್ಧ ಏನೇನು ಪ್ರಕರಣ?