ಜೈಪುರ: ವೀಡಿಯೋ ಕಾಲ್‌ನಲ್ಲಿ ಪೋರ್ನ್ ವೀಡಿಯೋ ಪ್ಲೇ ಮಾಡುವ ಮೂಲಕ ಕೇಂದ್ರ ಸಚಿವರನ್ನ (Union Minister) ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದ ರಾಜಸ್ಥಾನದ ಇಬ್ಬರು ವ್ಯಕ್ತಿಗಳನ್ನ ದೆಹಲಿ ಪೊಲೀಸರು (Delhi Police) ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವೀಡಿಯೋ ಕಾಲ್‌ನಲ್ಲಿ ಪೋರ್ನ್ ಪ್ಲೇ ಮಾಡಿ, ರೆಕಾರ್ಡ್ ಮಾಡಿಕೊಂಡ ಬಳಿಕ ಈ ವೀಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿಬಿಡುವುದಾಗಿ ಸಚಿವರಿಗೆ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ನನ್ನ 3ನೇ ಅವಧಿಯಲ್ಲಿ ಭಾರತ ವಿಶ್ವದ ಟಾಪ್ 3 ಆರ್ಥಿಕತೆಯಲ್ಲಿ ಒಂದಾಗಲಿದೆ: ಮೋದಿ ಭರವಸೆ
Advertisement
Advertisement
ಪೊಲೀಸರ ಮಾಹಿತಿ ಪ್ರಕಾರ, ಕಳೆದ ಜೂನ್‌ನಲ್ಲಿ ಸಚಿವರಿಗೆ ವಾಟ್ಸಪ್‌ನಲ್ಲಿ (WhatsApp) ವೀಡಿಯೋ ಕರೆ ಬಂದಿತ್ತು. ಅವರು ಕರೆ ಸ್ವೀಕರಿಸಿದ ತಕ್ಷಣ ಪೋರ್ನ್ ವೀಡಿಯೋ ಪ್ಲೇ ಆಗಲು ಪ್ರಾರಂಭವಾಯಿತು. ಅವರ ಮುಖವೂ ಅದರಲ್ಲಿ ಸೆರೆಯಾಗಿತ್ತು. ಬಳಿಕ ವೀಡಿಯೋ ಕರೆ ಸ್ಥಗಿತಗೊಳಿಸಿದ ವ್ಯಕ್ತಿ ಸಚಿವರಿಗೆ ಮತ್ತೆ ಕರೆ ಮಾಡಿ ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ 2 ಮದ್ಯದ ಬಾಟಲಿ ಕೊಂಡ್ಯೊಯಲು ಅಬಕಾರಿ ಇಲಾಖೆಯ ಆಕ್ಷೇಪ
Advertisement
Advertisement
ಈ ಬಗ್ಗೆ ದೂರು ದಾಖಲಾದ ನಂತರ ಆರೋಪಿ ಮೊಹಮ್ಮದ್ ವಕೀಲ್ ಮತ್ತು ಮೊಹಮ್ಮದ್ ಸಾಹಿಬ್ ಆರೋಪಿಗಳನ್ನ ಜುಲೈನಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಇನ್ನಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
Web Stories