ಚಿಕ್ಕಮಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಚಿಕ್ಕಮಗಳೂರು (Chikkamagaluru) ನಗರದ ಬೈಪಾಸ್ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ನಗರದ ವಾಸೀಮ್ ಹಾಗೂ ನಾಜೀಮಾ ಬಾನು ಬಂಧಿತ ಆರೋಪಿಗಳು. ಶಿವಮೊಗ್ಗದಿಂದ (Shivamogga) ಡಿಯೋ ಬೈಕಿನಲ್ಲಿ ಗಾಂಜಾ ತರುತ್ತಿದ್ದಾಗ ದಂಪತಿ ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ವಾಸೀಮ್ ಪತ್ನಿ ನಾಜೀಮಾ ಬಾನು ಮಾರ್ಕೆಟ್ ರಸ್ತೆಯಲ್ಲಿ ಬುರ್ಖಾದೊಳಗೆ ಗಾಂಜಾ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಳು.
ಬಂಧಿತರಿಂದ ಪೊಲೀಸರು 10 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.