ಲಕ್ನೋ: ಲುಲು ಮಾಲ್‍ಗೆ ನುಗ್ಗಿ ಶನಿವಾರ ಹನುಮಾನ್ ಚಾಲೀಸಾ ಪಠಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನೂತನವಾಗಿ ನಿರ್ಮಾಣವಾಗಿರುವ ಲುಲು ಶಾಪಿಂಗ್ ಮಾಲ್‍ಗೆ ಪ್ರವೇಶಿಸಲು ಪ್ರಯತ್ನಿಸಿ ಗಲಾಟೆ ಮಾಡಿದ್ದ ಸುಮಾರು 15 ಮಂದಿಯನ್ನು ವಶಕ್ಕೆ ಪಡೆಯಲಾಯಿತು.
ಈ ಕುರಿತಂತೆ ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತ (ದಕ್ಷಿಣ) ಗೋಪಾಲ್ ಕೃಷ್ಣ ಚೌಧರಿ ಅವರು, ಮಾಲ್ ಒಳಗೆ ಪ್ರವೇಶಿಸಿದ ಇಬ್ಬರು ನೆಲದ ಮೇಲೆ ಕುಳಿತು ಹನುಮಾನ್ ಚಾಲೀಸಾ ಓದಲು ಆರಂಭಿಸಿದರು. ಈ ಬಗ್ಗೆ ಮಾಲ್‍ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಇಬ್ಬರನ್ನು ಅರೆಸ್ಟ್ ಮಾಡಲಾಯಿತು. ಇದರಿಂದಾಗಿ ಮತ್ತೊಂದು ಪ್ರತಿಭಟನಾಕಾರರ ಗುಂಪು ಮಾಲ್‍ಗೆ ಪ್ರವೇಶಿಸಲು ಯತ್ನಿಸಿ ಗಲಾಟೆ ಮಾಡಲು ಆರಂಭಿಸಿದರು. ಹೀಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಬಾರದೆಂಬ ಉದ್ದೇಶದಿಂದ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದು ನಂತರ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಯಿತು ಎಂದು ತಿಳಿಸಿದ್ದಾರೆ.
Hindus are protesting outside #LULU Mall in Lucknow ????
There were instances of Open Namaz inside the Mall⚡#LuluMallLucknow pic.twitter.com/1idVZcyO80
— The Analyzer (@Indian_Analyzer) July 16, 2022
ಇತ್ತೀಚೆಗಷ್ಟೇ ಲುಲು ಮಾಲ್‍ನ ಒಳಗಡೆ ಮುಸ್ಲಿಮರ ಗುಂಪೊಂದು ನಮಾಜ್ ಮಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗಾಗಿ ನಮಾಜ್ ಮಾಡಿದ ಗುಂಪಿನವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು.
Namaz inside Lulu Mall, Lucknow …. even malls are not spared now ???? pic.twitter.com/lES84Sqhuy
— Vikas (@VikasPronamo) July 13, 2022
ನಂತರ ಮಾಲ್ ಅಧಿಕಾರಿಗಳು ಶುಕ್ರವಾರ ಯಾವುದೇ ಧರ್ಮದ ಧಾರ್ಮಿಕ ಪ್ರಾರ್ಥನೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ಮಾಲ್‍ನ ಹಲವು ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಹಾಕಿದ್ದಾರೆ. ಬಳಿಕವೂ ಮತ್ತೊಂದು ವೀಡಿಯೊ ಬಿಡುಗಡೆಯಾಗಿತ್ತು. ಇದನ್ನು ಖಂಡಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಮಾಲ್ ಹೊರಗೆ ಪ್ರತಿಭಟನೆಗೆ ಮುಂದಾಗಿತ್ತು. ತಾವೂ ಕೂಡ ಹನುಮಾನ್ ಚಾಲೀಸಾವನ್ನು ಪಠಿಸಲು ಅನುಮತಿ ನೀಡಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಈ ಮನವಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು. ಹೀಗಾಗಿ ಮಾಲ್ ಮುಂದೆ ಪ್ರತಿಭಟನೆಯನ್ನು ಆರಂಭಿಸಿದ ಪ್ರತಿಭಟನಾಕಾರರು, ಹನುಮಾನ್ ಚಾಲೀಸಾ ಪಠಿಸಲು ಲುಲು ಮಾಲ್‍ನ ಒಳಗೆ ಬಂದಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರನ್ನು ಕಂಡು ಕೆಲ ಪ್ರತಿಭಟನಾಕಾರರು ಓಡಿದ್ದಾರೆ. ಕೊನೆಗೂ ಪೊಲೀಸರು ಪ್ರತಿಭಟನೆಯಲ್ಲಿ ತೊಡಗಿದ್ದ ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.
ಜುಲೈ 10ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲುಲು ಮಾಲ್ ಅನ್ನು ಉದ್ಘಾಟಿಸಿದ್ದರು. ಈ ಮಾಲ್ ಅನ್ನು ಭಾರತೀಯ ಮೂಲದ ಬಿಲಿಯನೇರ್ ಯೂಸುಫ್ ಅಲಿ ಎಂಎ ನೇತೃತ್ವದ ಅಬುಧಾಬಿ ಮೂಲದ ಲುಲು ಗ್ರೂಪ್ ತೆರೆದಿದೆ.