Tuesday, 16th October 2018

Recent News

‘ಅಂಜನಿಪುತ್ರ’ ನಿರ್ಮಾಪಕ ಕುಮಾರ್ ತಂಗಿ ಮಗನ ಕೊಲೆ ಪ್ರಕರಣ: ಇಬ್ಬರ ಬಂಧನ

ಬೆಂಗಳೂರು: ಅಂಜನಿಪುತ್ರ ಸಿನಿಮಾ ನಿರ್ಮಾಪಕ ಕುಮಾರ್ ತಂಗಿ ಮಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸದ್ದಾಂ ಹುಸೇನ್ ಹಾಗೂ ಮೊಹಮ್ಮದ್ ಶಫಿ ಬಂಧಿತ ಆರೋಪಿಗಳು. ಏಪ್ರಿಲ್ 13 ರಂದು ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿದ್ದು, ಮೊಬೈಲ್ ದೋಚಲು ಹೋಗಿ ಆರೋಪಿಗಳು ರಾಹುಲ್ ನನ್ನು ಕೊಲೆ ಮಾಡಿದ್ದರು.

ರಾಹುಲ್ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಆರೋಪಿಗಳು ಆತನ ಮೊಬೈಲ್ ಕಸಿದುಕೊಳ್ಳಲು ಬಂದಿದ್ದರು. ಈ ವೇಳೆ ರಾಹುಲ್ ಕುತ್ತಿಗೆಗೆ ಚಾಕು ಹಾಕಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.

ಪೊಲೀಸರು ರಾಹುಲ್ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ಆರೋಪಿಗಳ ಮೇಲೆ ಚಂದ್ರ ಲೇಔಟ್, ವಿಜಯನಗರ ಠಾಣೆಯಲ್ಲಿ ಡಕಾಯತಿ ಕೇಸ್ ದಾಖಲಾಗಿದೆ.

Leave a Reply

Your email address will not be published. Required fields are marked *