ಲಕ್ನೋ: ಸೈನಿಕರಿಬ್ಬರ ಮೇಲೆ ಕೆಲ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಬಾಘ್ಪತ್ನಲ್ಲಿ ಶನಿವಾರ ಏಳು ಜನರ ಗುಂಪೊಂದು ನಡು ರಸ್ತೆಯಲ್ಲಿ ಕೋಲು ಹಿಡಿದು ಸೈನಿಕರಿಗೆ ಹೊಡೆದಿದ್ದಾರೆ. ಇದರಿಂದಾಗಿ ಒಬ್ಬ ಸೈನಿಕರ ತಲೆಗೆ ಪೆಟ್ಟು ಬಿದ್ದು, ರಕ್ತಸ್ರಾವವಾಗುತ್ತಿತ್ತು. ಅಷ್ಟೇ ಅಲ್ಲದೆ ಮತ್ತೊಬ್ಬ ಸೈನಿಕನ ಮೇಲೂ ಹಲ್ಲೆ ಮಾಡಿದ್ದಾರೆ.
Advertisement
#WATCH Baghpat: Two Army jawans(one with a red bag and one in green kurta) thrashed by restaurant employees yesterday after a minor argument.More than 7 people have been arrested by Police. (Note: Abusive language) pic.twitter.com/Of0oaDWdr5
— ANI UP/Uttarakhand (@ANINewsUP) June 2, 2019
Advertisement
ಸೈನಿಕರು ರೆಸ್ಟೋರೆಂಟ್ಗೆ ಊಟ ಮಾಡಲು ಹೋಗಿದ್ದರು. ಊಟ ಮುಗಿಸಿ ಹಣ ಪಾವತಿ ಮಾಡುವಾಗ ಬಿಲ್ ನೋಡಿ ಮಾಲೀಕರನ್ನು ಪ್ರಶ್ನಿಸಿದ್ದಾರೆ. ಇದರಿಂದಾಗಿ ಸೈನಿಕರು ಹಾಗೂ ಮಾಲೀಕರ ಮಧ್ಯೆ ವಾಗ್ದಾಳಿ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡು ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುವ 7 ಜನರು ಸೈನಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
Advertisement
ಇಬ್ಬರು ಸೈನಿಕರಲ್ಲಿ ಒಬ್ಬರು ಬಿಳಿ, ಕೆಂಪು ಪಟ್ಟಿ ಟೀ ಶರ್ಟ್ ಧರಿಸಿದ್ದರೆ, ಮತ್ತೊಬ್ಬರು ಹಸಿರು ಬಣ್ಣದ ಕುರ್ತಾ ಹಾಕಿದ್ದಾರೆ. ನಡು ರಸ್ತೆಯಲ್ಲಿ ಘಟನೆ ನಡೆಯುತ್ತಿದ್ದರೂ ಸ್ಥಳೀಯರು ನಿಂತು ನೋಡಿದರೇ ವಿನಾ: ಯಾರೂ ತಡೆಯಲು ಮುಂದಾಗಲಿಲ್ಲ.
Advertisement
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಏಳು ಜನ ಆರೋಪಿಗಳನ್ನು ಬಂಧಿಸಿದ್ದೇವೆ. ಸದ್ಯ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಪೊಲೀಸ್ ಅಧಿಕಾರಿ ರಾಮ್ನಂದ್ ಕುಶ್ವಾಹ ತಿಳಿಸಿದ್ದಾರೆ.
Ramnand Kushwaha,CO: Two Army jawans were having lunch at a restaurant when they had an argument with a person, then the restaurant staff got involved and a fight broke out. Case registered and 7-8 restaurant employees have been arrested, further probe underway. #Baghpat pic.twitter.com/O3H3SmL6UV
— ANI UP/Uttarakhand (@ANINewsUP) June 2, 2019