ಬೋರ್​ವೆಲ್​ಗೆ ಬಿದ್ದು ಮಗು ಸಾವು ಪ್ರಕರಣಕ್ಕೆ ಟ್ವಿಸ್ಟ್- ತಂದೆಯಿಂದಲೇ ಕಂದಮ್ಮನ ಕೊಲೆ!

Public TV
2 Min Read
belagavi kid 3

ಚಿಕ್ಕೋಡಿ(ಬೆಳಗಾವಿ): ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ರಾಯಬಾಗ ತಾಲೂಕಿನ ಆಲಖನೂರಿನಲ್ಲಿ ಎರಡೂವರೆ ವರ್ಷದ ಮಗು ಬೋರ್​ವೆಲ್​ನಲ್ಲಿ ಸಿಕ್ಕಿ ಪ್ರಾಣ ಬಿಟ್ಟಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಮಗುವನ್ನು ಹೊಡೆದು ಕೊಲೆ ಮಾಡಿ ಬೋರ್​ವೆಲ್​ಗೆ  ಎಸೆದಿರುವುದಾಗಿ ಬೆಳಕಿಗೆ ಬಂದಿದೆ.

belagavi kid

ಶರತ್ ಸಿದ್ದಪ್ ಹಸರೆ (2) ಮೃತ ದುರ್ದೈವಿ. ಹೆತ್ತ ತಂದೆಯೇ ಶರತ್ ನನ್ನು ಹೊಡೆದು ಕೊಂದು ಬೋರ್​ವೆಲ್​ಗೆ ಹಾಕಿ ಮಗು ಕಾಣೆಯಾಗಿದೆ, ಬೋರ್​ವೆಲ್​ನಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದನು. ಆದರೆ ಇದೀಗ ತಂದೆಯೇ ಮಗುವನ್ನು ಹೊಡೆದು ಕೊಲೆ ಮಾಡಿ ಬೋರ್​ವೆಲ್​ನಲ್ಲಿ ಎಸೆದಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಮಗುವಿನ ಸಾವಿನ ಕುರಿತು ಅಜ್ಜಿ ಗಂಭೀರ ಆರೋಪವನ್ನು ಮಾಡಿದ್ದರು. ಮಗುವಿನ ತಂದೆ ಸಿದ್ದಪ್ಪ ಕೊಲೆ ಮಾಡಿರುವುದಾಗಿ ಅಜ್ಜಿ ಸರಸ್ವತಿ ದೂರಿದ್ದರು. ಈ ಹಿನ್ನೆಲೆಯಲ್ಲಿ ಮಗುವಿನ ತಂದೆ ಸಿದ್ದಪ್ಪ ಹಸರೆ ಮೇಲೆ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದರು. ಪೊಲೀಸರು ಈ ವಿಚಾರವಾಗಿ ತನಿಖೆ ಮಾಡಿದಾಗ, ಪಾಪಿ ತಂದೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ತಂದೆ ಹಾರೂಗೇರಿ ಪೊಲೀಸರ ವಶದಲ್ಲಿದ್ದಾನೆ.

belagavi kid 2

ಪ್ರಕರಣ ಹಿನ್ನಲೆ ಏನು?:
ನಿನ್ನೆ ಸಂಜೆಯಿಂದಲೇ ಮಗು ನಾಪತ್ತೆಯಾಗಿತ್ತು. ಕುಟುಂಬದವರು ಮಗುವಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. ಮನೆಯಿಂದ 200 ಮೀ. ದೂರದಲ್ಲಿ ಕೊರೆಸಿದ್ದ ಬೋರ್​ವೆಲ್​ಗೆ ಮಗು ಶರತ್ ಬಿದ್ದಿರುವುದು ತಿಳಿದುಬಂದಿದೆ. 15 ಅಡಿ ಆಳದಲ್ಲಿ ಮಗು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಮಗು ಶವವಾಗಿ ಪತ್ತೆಯಾಗಿದೆ. ಇದನ್ನೂ ಓದಿ:  ಬೋರ್​ವೆಲ್​ಗೆ ಬಿದ್ದ ಎರಡೂವರೆ ವರ್ಷದ ಮಗು ಶವವಾಗಿ ಪತ್ತೆ

ಆಟವಾಡುತ್ತಾ ಹೋಗಿ ಮನೆಯಿಂದ ನೂರು ಅಡಿ ದೂರದಲ್ಲಿದ್ದ ಬೋರ್​ವೆಲ್​ಗೆ ಶರತ್ ಬಿದ್ದಿದ್ದಾನೆ. ಇತ್ತ ಮಗು ಕಾಣದಿರುವುದುನ್ನು ಗಮನಿಸಿದ ಅಪಹರಣವಾಗಿರಬಹದು ಎಂದು ಹಾರೂಗೇರಿ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು. ಹಾಗೇ ತೋಟದ ಮನೆಯಲ್ಲಿ ವಾಸವಿರುವ ಮಗು ಶರತ್ ತಂದೆ ಸಿದ್ದಪ್ಪ ಮತ್ತು ಕುಟುಂಟದವರು ಮಗು ಮನೆಯಿಂದ ಇನ್ನೂರು ಮೀಟರ್ ದೂರದಲ್ಲಿ ಕೊರೆಸಿದ್ದ ಬೋರ್ ವೆಲ್‍ಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದರು. ಮಗುವನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು.

belagavi kid 1

ಈ ವೇಳೆ ನಿನ್ನೆ ಕಾಣೆಯಾಗಿದ್ದ ಮಗು ಬೋರ್​ವೆಲ್​ನಲ್ಲಿ ಶವವಾಗಿ ಪತ್ತೆಯಾಗಿತ್ತು. ಸುಮಾರು 7 ಅಡಿಗಳಷ್ಟು ಆಳದಲ್ಲಿ ಬೋರ್ವೆಲ್‍ನಲ್ಲಿ ಸಿಲುಕಿದ್ದ ಮಗುವನ್ನು ಅಗ್ನಿ ಶಾಮಕದಳದ ಕಾರ್ಯಾಚರಣೆ, ಹಗ್ಗ ಬಿಟ್ಟು ಶವ ತೆಗೆದು ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗೆ ರವಾನಿಸಿದ್ದರು. ಕೊಲೆ ಮಾಡಿ ಎಸೆಯಲಾಗಿದೆಯಾ ಅಥವಾ ಆಟವಾಡುತ್ತಾ ಬೋರ್ ವೆಲ್‍ಗೆ ಬಿದ್ದಿದೆಯಾ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದರು. ಆದರೆ ಇದೀಗ ತನಿಖೆಯಿಂದ ಮಗುವನ್ನು ಹೊಡೆದು ಕೊಲೆ ಮಾಡಿರುವುದು ಬಯಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *