ಚೆನ್ನೈ: ಕೊರೊನಾ ಮಹಾಮಾರಿ ಬಂದ ಬಳಿಕ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಈ ಮಾಸ್ಕ್ ಬಳಕೆಯಲ್ಲೂ ಫ್ಯಾಶನ್ ಕಂಡುಕೊಳ್ಳಲಾಗಿದ್ದು, ಜನ ಚಿನ್ನ ಹಾಗೂ ಬೆಳ್ಳಿಯ ಮಾಸ್ಕ್ ಧರಿಸಿ ಸುದ್ದಿಯಾಗುತ್ತಿದ್ದಾರೆ. ಇದೇ ರೀತಿ ಕೊಯಂಬತ್ತೂರು ಮೂಲಕ ಅಕ್ಕಸಾಲಿಗರೊಬ್ಬರು ಇದೀಗ ಚಿನ್ನ ಹಾಗೂ ಬೆಳ್ಳಿ ಬಳಸಿ ಮಾಸ್ಕ್ ತಯಾರಿಸಿ ಸುದ್ದಿಯಾಗಿದ್ದಾರೆ.
ಹೌದು. ಮೂಲತಃ ಅಕ್ಕಸಾಲಿಗರಾಗಿರುವ ರಾಧಾಕೃಷ್ಣನ್ ಸುಂದರಾಮ್ ಆಚಾರ್ಯರು 0.06 ಮಿಲಿಮೀಟರ್ ತೆಳುವಿರುವ ಚಿನ್ನ ಹಾಗೂ ಬೆಳ್ಳಿಯ ಎಳೆಗಳನ್ನು ಬಳಸಿ ಮಾಸ್ಕ್ ತಯಾರಿಸಿದ್ದಾರೆ. 2.75 ರೂ. ಮೌಲ್ಯದ 18 ಕ್ಯಾರೆಟ್ ಚಿನ್ನ ಹಾಗೂ 15 ಸಾವಿರ ರೂ. ಬೆಳ್ಳಿಯನ್ನು ಬಳಸಿ ಮಾಸ್ಕ್ ತಯಾರಿಸಿರುವುದಾಗಿ ರಾಧಾಕೃಷ್ಣ ತಿಳಿಸಿದ್ದಾರೆ.
Advertisement
Tamil Nadu: Radhakrishnan Sundaram Acharya, a goldsmith from Coimbatore has designed masks using gold & silver strings. He says,"the gold mask has been made using 18-carat gold which costs Rs 2.75 lakhs& the silver mask costs Rs 15,000. Around 9 orders have been confirmed so far" pic.twitter.com/HJDIBrfDTd
— ANI (@ANI) July 19, 2020
Advertisement
ತಯಾರಿಸಲು ಕಾರಣವೇನು?
ದೇಶದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿಯ ಮಾಸ್ಕ್ ತಯಾರಿಸಿದ್ದೇನೆ. ಇಂತಹ ಮಾಸ್ಕ್ ಗಳನ್ನು ಸಾಮಾನ್ಯ ಜನ ಖರೀದಿಸಿ ಧರಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಆದರೆ ಶ್ರೀಮಂಂತರು ಮದುವೆ ಸಮಾರಂಭಗಳಲ್ಲಿ ಚಿನ್ನದ ಮಾಸ್ಕ್ ಬಳಸುತ್ತಾರೆ. ಈಗಾಗಲೇ ಉತ್ತರ ಭಾರತದಿಂದ ನನಗೆ 9 ಮಾಸ್ಕ್ ತಯಾರಿಸಿ ಕೊಡುವಂತೆ ಆರ್ಡರ್ ಬಂದಿದೆ ಎಂದು ರಾಧಾಕೃಷ್ಣ ತಿಳಿಸಿದ್ದಾರೆ. ಇದನ್ನೂ ಓದಿ: 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!
Advertisement
Advertisement
ಈ ಮಾಸ್ಕ್ ತಯಾರಿಸಲು ನಾನು 7 ದಿನ ತೆಗೆದುಕೊಂಡಿದ್ದೇನೆ. ನನಗೆ ಏನಾದರೂ ಹೊಸತು, ವಿಭಿನ್ನವಾಗಿ ಮಾಡುವುದೆಂದರೆ ತುಂಬಾನೆ ಖುಷಿ. ಆಭ ರಣ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಧಾಕೃಷ್ಣ ಅವರು ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟರು. ಆ ಬಳಿಕ ತಾನೇ ಚಿನ್ನದ ಎಳೆಗಳಿಂದ ಬೇರೆ ಬೇರೆ ಡಿಸೈನ್ ಗಳನ್ನು ಮಾಡಲು ಆರಂಭಿಸಿದ್ದಾರೆ. ಚಿನ್ನದ ಉಡುಪು, ಕೈ ಬ್ಯಾಗ್ ಹಾಗೂ ಛತ್ರಿ ಸೇರಿದಂತೆ ಅನೇಕ ವಸ್ತುಗಳನ್ನು ತಯಾರು ಮಾಡಿದ್ದರು. ಇದನ್ನೂ ಓದಿ: 3.5 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಧರಿಸಿ ಗಮನಸೆಳೆದ ಉದ್ಯಮಿ!