ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಇಂದು ವಾಷಿಂಗ್ಟನ್ (Washington) ಡಿಸಿಯ ಕ್ಯಾಪಿಟಲ್‌ನಲ್ಲಿ ನಡೆಯುವ ಐತಿಹಾಸಿಕ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರಾಗುವವರಿಗೆ ವರ್ಷಕ್ಕೆ 4 ಲಕ್ಷ ಡಾಲರ್ (2 ಕೋಟಿ 70 ಲಕ್ಷ ರೂ.) ಸಂಬಳ ಸಿಗುತ್ತದೆ. ಸಿಗುವ ವೇತನದ ಜೊತೆಗೆ ಭತ್ಯೆ, ಸೌಲಭ್ಯಗಳು ಕೂಡ ಅಷ್ಟೇ ಪವರ್‌ಫುಲ್ ಆಗಿವೆ. ಅಲ್ಲದೇ ಪ್ರತ್ಯೇಕ ಬಂಗಲೆ, ಖಾಸಗಿ ವಿಮಾನ, ಹೆಲಿಕಾಪ್ಟರ್‌ನಂತಹ ಹಲವು ಸೌಲಭ್ಯ ಸಿಗುತ್ತದೆ.ಇದನ್ನೂ ಓದಿ: ಇದು ನನ್ನ ಕೊನೆಯ ನಿರೂಪಣೆ, ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು: ಸುದೀಪ್ ಭಾವುಕ ಪೋಸ್ಟ್
Advertisement
Advertisement
ಅಮೆರಿಕದ ಅಧ್ಯಕ್ಷರಿಗೆ ಬೃಹತ್ ಬಂಗಲೆ ಶ್ವೇತಭವನ, ಬೇರ್‌ಹೌಸ್ ಅತಿಥಿಗೃಹ, ಅತ್ಯಾಧುನಿಕ ವಿಮಾನ ಏರ್‌ಫೋರ್ಸ್ ಒನ್, ಅಧಿಕೃತ ಹೆಲಿಕಾಪ್ಟರ್ ಮರೈನ್ ಒನ್, ಯಾವುದೇ ದಾಳಿಯನ್ನು ತಡೆಯುವ ಶಕ್ತಿಯುಳ್ಳ ಲಿಮೋಸಿನ್ ಕಾರು ಸಿಗುತ್ತದೆ. ಜೊತೆಗೆ 19 ಸಾವಿರ ಡಾಲರ್ ಮನರಂಜನಾ ಭತ್ಯೆ, 50 ಸಾವಿರ ಡಾಲರ್ ವೆಚ್ಚ ಭತ್ಯೆ ಹಾಗೂ 1 ಲಕ್ಷ ಡಾಲರ್ ಸಾರಿಗೆ ಭತ್ಯೆ ದೊರೆಯುತ್ತದೆ. ನಿವೃತ್ತರಾದ ಬಳಿಕ ವಾರ್ಷಿಕ 2 ಲಕ್ಷ ಅಮೆರಿಕನ್ ಡಾಲರ್ ಪಿಂಚಣಿ ಸಿಗಲಿದೆ. ಅಧ್ಯಕ್ಷರ ನಿಧನದ ಬಳಿಕ ಅವರ ಪತ್ನಿಗೆ 1 ಲಕ್ಷ ಡಾಲರ್ ಪಿಂಚಣಿ ದೊರೆಯಲಿದೆ.
Advertisement
ಅಮೆರಿಕದ ಅಧ್ಯಕ್ಷರು ಯಾವುದೇ ವಿದೇಶ ಪ್ರವಾಸ ಹೋದಾಗ ಲಿಮೋಸಿನ್ ಕಾರು ಸಹ ವಿಶೇಷ ವಿಮಾನದಲ್ಲಿ ಹೋಗುತ್ತದೆ. ಈ ಕಾರಿನಲ್ಲೇ ಅವರು ವಿದೇಶದಲ್ಲಿ ಪ್ರಯಾಣ ಮಾಡುತ್ತಾರೆ.
Advertisement
ಇಂದು (ಜ.20) ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸೆಲೆಬ್ರಿಟಿಗಳು, ವಿದೇಶಿ ಗಣ್ಯರು ಮತ್ತು ಕಂಪನಿಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ವಿದೇಶಿ ಅತಿಥಿಗಳು ಯಾರು?
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅರ್ಜೆಂಟೀನಾ ಅಧ್ಯಕ್ಷ -ಜೇವಿಯರ್ ಮಿಲಿ, ಹಂಗೇರಿಯನ್ ಪ್ರಧಾನಿ ವಿಕ್ಟರ್ ಓರ್ಬನ್, ಜಪಾನಿನ ವಿದೇಶಾಂಗ ಸಚಿವ ಟಕೇಶಿ ಇವಾಯಾ ಅವರು ಭಾಗವಹಿಸಲಿದ್ದಾರೆ. ಇನ್ನೂ ಬಲ ಪಂಥೀಯ ನಾಯಕರಾದ ನಿಗೆಲ್ ಫರಾಜ್ (ಯುಕೆ), ಎರಿಕ್ ಜೆಮ್ಮೌರ್ (ಫ್ರಾನ್ಸ್) ಮತ್ತು ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಭಾಗಿಯಾಗುವ ಸಾಧ್ಯತೆಯಿದೆ.
ಗೈರಾಗಲಿರುವ ಗಣ್ಯರು
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಆಹ್ವಾನವಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಗೈರುಹಾಜರಾಗಿದ್ದಾರೆ. ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಗೈರಾಗಲಿದ್ದಾರೆ.
ಭಾಗವಹಿಸುವ ಉದ್ಯಮಿಗಳು:
ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಎಲಾನ್ ಮಸ್ಕ್, ಅಮೆಜಾನ್ ಕಾರ್ಯನಿರ್ವಾಹಕ ಅಧ್ಯಕ್ಷ ಜೆಫ್ ಬೆಜೋಸ್, ಗೂಗಲ್ ಸಿಇಒ ಸುಂದರ್ ಪಿಚೈ, ಆಪಲ್ ಸಿಇಒ ಟಿಮ್ ಕುಕ್, ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಟಿಕ್ ಟಾಕ್ ಸಿಇಒ ಶೌ ಜಿ ಚೆವ್ ಭಾಗಿಯಾಗಲಿದ್ದಾರೆ.ಇದನ್ನೂ ಓದಿ: ರಜತ್ ಕುಟುಂಬಕ್ಕೆ ಟ್ರೋಲ್ ಟೆನ್ಷನ್ – ಮಾಜಿ ಗೆಳತಿ ಜೊತೆಗಿನ ಫೋಟೋ ವೈರಲ್