ಬೆಳಗಾವಿ: ರಾಜ್ಯದಲ್ಲಿ 2.53 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಈ ವರ್ಷದಲ್ಲಿ ಒಂದು ಲಕ್ಷ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಮಂಜೇಗೌಡ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಿಎಂ, ರಾಜ್ಯದಲ್ಲಿ ಒಟ್ಟು 7.60 ಲಕ್ಷ ಹುದ್ದೆ ಮಂಜೂರಾಗಿದೆ. ಈ ಪೈಕಿ 5.11 ಲಕ್ಷ ಹುದ್ದೆ ಭರ್ತಿಯಾಗಿವೆ. ಇದರಲ್ಲಿ 2.53 ಲಕ್ಷ ಹುದ್ದೆ ಖಾಲಿ ಇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಅಂದು ಸಚಿವರಾಗಿ ಕಲಾಪಕ್ಕೆ ಬರುವುದಾಗಿ ಶಪಥ – ಇಂದು ಮಾಜಿ ಸಚಿವರಾಗಿ ಬಂದ ರಮೇಶ್ ಜಾರಕಿಹೊಳಿ
Advertisement
Advertisement
ಸಿ ಮತ್ತು ಡಿ ಗ್ರೂಪ್ ಹುದ್ದೆಗಳನ್ನ ಗುತ್ತಿಗೆ ಆಧಾರದಲ್ಲಿ ತುಂಬಲು ಸೂಚನೆ ನೀಡಲಾಗಿದೆ. ಸರ್ಕಾರಿ ಕೆಲಸಕ್ಕೆ ತೊಂದರೆ ಆಗದಂತೆ ಕ್ರಮವಹಿಸಲಾಗಿದೆ. A ಮತ್ತು B ಗ್ರೂಪ್ ಹುದ್ದೆಗಳನ್ನ ಇನ್ಚಾರ್ಜ್ ನೀಡಲಾಗಿದೆ. ಈ ವರ್ಷ 1 ಲಕ್ಷ ಸರ್ಕಾರಿ ಹುದ್ದೆ ತುಂಬಲು ಒಪ್ಪಿಗೆ ನೀಡಿದ್ದೇನೆ. ಆದ್ಯತೆಯ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಮಾಡ್ತೀವಿ ಎಂದು ತಿಳಿಸಿದರು.
Advertisement
Advertisement
ಸಫಾಯಿ ಕರ್ಮದ ಹುದ್ದೆ ಈಗಾಗಲೇ 11 ಸಾವಿರಕ್ಕೆ ನೋಟಿಫಿಕೇಶನ್ ಆಗಿದೆ. ಮತ್ತೆ 12 ಸಾವಿರ ಸಫಾಯಿ ಕರ್ಮಚಾರಿಗಳ ಹುದ್ದೆ ತುಂಬುವ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮಂಗಳೂರು ವಿವಿ ಫಲಿತಾಂಶ 10 ದಿನದೊಳಗೆ ಪ್ರಕಟ – ಅಶ್ವಥ್ ನಾರಾಯಣ