Connect with us

Cinema

ಒಂದು ವಾರದಲ್ಲಿ ರಜಿನಿ 2.0 ಸಿನಿಮಾ ಗಳಿಸಿದ್ದು ಕೋಟಿ ಕೋಟಿ ಹಣ

Published

on

ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್, ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅಭಿನಯದ `2 ಪಾಯಿಂಟ್ ಒ’ ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿದ್ದು, ಕಳೆದ ಗುರುವಾರ ವಿಶ್ವಾದ್ಯಂತ ತೆರೆ ಕಂಡಿರುವ ಚಿತ್ರ ಒಂದೇ ವಾರದಲ್ಲಿ ಬರೋಬ್ಬರಿ 500 ಕೋಟಿ ಗಳಿಸಿ ದಾಖಲೆ ಬರೆದಿದೆ.

ಈ ಕುರಿತು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ವಿಶ್ವಾದ್ಯಂತ ಪ್ರದರ್ಶನಗೊಳ್ಳುತ್ತಿರುವ 2.0 ಸಿನಿಮಾದ ಮೊದಲ ವಾರದಲ್ಲಿ 500 ಕೋಟಿ ರೂಪಾಯಿ ಗಳಿಸಿದೆ ಎಂದು ತಿಳಿಸಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಇದುವರೆಗೂ ಭಾರತ ಚಿತ್ರರಂಗದಲ್ಲಿ ನಿರ್ಮಾಣವಾಗಿದ್ದ ಎಲ್ಲಾ ಚಿತ್ರಗಳಿಗಿಂತ ಅಧಿಕ ಬಜೆಟ್ ಹೊಂದಿದ್ದ ಸಿನಿಮಾ ಎನಿಸಿಕೊಂಡಿದೆ. ನಿರ್ದೇಶಕ ಶಂಕರ್, ರಜನಿಕಾಂತ್, ಅಕ್ಷಯ್ ಕುಮಾರ್ ಹಾಗೂ ಆ್ಯಮಿ ಜಾಕ್ಸನ್ ಮುಖ್ಯ ತಾರಾಗಣದ ಚಿತ್ರ ಬಿಡುಗಡೆಗೂ ಮುನ್ನವೇ ಹೆಚ್ಚಿನ ನಿರೀಕ್ಷೆ ಮೂಡಿಸಿತ್ತು. ಮೊದಲ ದಿನವೇ 9 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ ಸದ್ಯ ಹಣ ಗಳಿಕೆಯ ಚಿತ್ರಗಳ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದುಕೊಂಡಿದೆ.

ಭಾರತದಲ್ಲಿ 6 ದಿನಗಳ ಮಾಹಿತಿ ಮೇರೆಗೆ ಇದುವರೆಗೂ 367 ಕೋಟಿ ರೂ. ಹಾಗೂ ವಿದೇಶದಲ್ಲಿ 121 ಕೋಟಿ ರೂ. ಗಳಿಸಿದೆ. ಅಲ್ಲದೇ ಸಿನಿಮಾದ ಹಿಂದಿ ಆವತರಣಿಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಗಳಿಸುತ್ತಿದೆ ಎಂದು ರಮೇಶ್ ಬಾಲಾ ತಿಳಿಸಿದ್ದಾರೆ. ದಂಗಲ್, ಟೈಗರ್ ಜಿಂದಾ ಹೈ, ಪದ್ಮಾವತ್ , ಸಂಜು, ಸುಲ್ತಾನ್ ಸಿನಿಮಾಗಳು ವಿಶ್ವದಾದ್ಯಂತ ಪ್ರದರ್ಶನಗೊಂಡು ಗಳಿಸಿದ್ದ ಮೊತ್ತವನ್ನೂ 2.0 ಚಿತ್ರ ಮೀರಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *