ಮುಂಬೈ: ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಮತ್ತು ಟಿ20 ಸರಣಿಗೆ ಕೆಲದಿನಗಳು ಬಾಕಿಯಿದೆ. ಈ ನಡುವೆ ಭಾರತ ತಂಡಕ್ಕೆ ಎರಡು ವರ್ಷಗಳ ಬಳಿಕ ಈ ಸ್ಟಾರ್ ಸ್ಪಿನ್ ಜೋಡಿ ಕಂಬ್ಯಾಕ್ ಮಾಡುವ ತಕವಕದಲ್ಲಿದೆ.
ಕೆಲ ವರ್ಷಗಳ ಹಿಂದೆ ಸೀಮಿತ ಓವರ್ ಗಳ ಭಾರತ ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸಿಕೊಂಡು ಮಿಂಚುತ್ತಿದ್ದ ಯಜುವೇಂದ್ರ ಚಹಲ್ ಮತ್ತು ಕುಲ್‍ದೀಪ್ ಯಾದವ್ ಆ ಬಳಿಕ ಕಳಪೆ ಫಾರ್ಮ್‍ನಿಂದಾಗಿ ತಂಡದಿಂದ ಬೇರ್ಪಟ್ಟಿತ್ತು. 2017ರಿಂದ 2019ರ ಅವಧಿಯಲ್ಲಿ ಭಾರತ ತಂಡದ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿದ್ದ ಕುಲ್ಚಾ ಜೋಡಿ ಎದುರಾಳಿ ತಂಡಕ್ಕೆ ನೀರು ಕುಡಿಸುವಷ್ಟರ ಮಟ್ಟಿಗೆ ಬೆಳೆದಿತ್ತು. ಆ ಬಳಿಕ ಫಾರ್ಮ್ ಕಳೆದುಕೊಂಡ ಕುಲ್‍ದೀಪ್ ಯಾದವ್ ತಂಡದಿಂದ ಬೇರ್ಪಟ್ಟಿದ್ದರು. ಚಹಲ್ ತಂಡದಲ್ಲಿದ್ದರೂ ಕೂಡ ಹೇಳಿಕೊಳ್ಳುವಷ್ಟರ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಧೋನಿ ಬ್ಯಾಟ್‍ನಿಂದ ಸಿಡಿದ ಸಿಕ್ಸರ್‌ಗಳ ವೀಡಿಯೋ ನೋಡಿ
Advertisement
Advertisement
ಕುಲ್ಚಾ ಜೋಡಿ ಇದೀಗ ಮತ್ತೆ ಎರಡು ವರ್ಷಗಳ ಬಳಿಕ ಭಾರತ ತಂಡದಲ್ಲಿ ಒಂದಾಗಿ ಆಡುವ ಅವಕಾಶ ಬಂದಿದೆ. ಚಹಲ್ ಈವರೆಗೆ 54 ಏಕದಿನ ಪಂದ್ಯದಿಂದ 5.21 ಎಕಾನಮಿಯಲ್ಲಿ 92 ವಿಕೆಟ್, ಟಿ20 ಯಲ್ಲಿ 48 ಪಂದ್ಯಗಳಿಂದ 8.4ರ ಎಕಾನಮಿಯಲ್ಲಿ 62 ವಿಕೆಟ್ ಕಬಳಿಸಿದ್ದಾರೆ. ಕುಲ್‍ದೀಪ್ ಯಾದವ್ 63 ಏಕದಿನ ಪಂದ್ಯದಿಂದ 5.22 ಎಕಾನಮಿಯಲ್ಲಿ 105 ವಿಕೆಟ್. ಟಿ20 ಯಲ್ಲಿ 7.11 ಎಕಾನಮಿಯಲ್ಲಿ 39 ವಿಕೆಟ್ ಪಡೆದಿದ್ದಾರೆ.
Advertisement
Advertisement
ಈ ಜೋಡಿ ಶ್ರೀಲಂಕಾ ಪ್ರವಾಸದಲ್ಲಿ ಒಟ್ಟಿಗೆ ಕಣಕ್ಕಿಳಿಯುವ ನೀರಿಕ್ಷೆ ಇದ್ದು, ಇವರಿಗೆ ಸ್ಪಿನ್ನರ್ ಗಳಾದ ರಾಹುಲ್ ಚಹರ್, ವರುಣ್ ವಕ್ರವರ್ತಿ ಮತ್ತು ಕೃಣಾಲ್ ಪಾಂಡ್ಯ ತೀವ್ರ ಪೈಪೋಟಿ ಕೊಡುತ್ತಿದ್ದಾರೆ.