2 ದಿನಗಳಲ್ಲಿ ದೆಹಲಿಗೆ ಸಿಎಂ ಬೊಮ್ಮಾಯಿ – ಕ್ರಿಯಾಶೀಲ ಕ್ಯಾಬಿನೆಟ್ ಟೀಮ್ ಬಗ್ಗೆ ಸೂಚನೆ

Public TV
2 Min Read
BOMMAI 4

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಸಂಪುಟ ರಚನೆಯ ಕಸರತ್ತು ಶುರುವಾಗಿದೆ. ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಸಂದರ್ಶನ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ಕೆಲವರನ್ನು ಸಂಪುಟದಿಂದ ಕೈಬಿಟ್ಟು ಕ್ರಿಯಾಶೀಲ ಸಂಪುಟ ರಚನೆಯ ಸುಳಿವು ನೀಡಿದ್ದಾರೆ. ಒಂದೆರಡು ದಿನಗಳ ಬಳಿಕ ದೆಹಲಿಗೆ ಬರಲು ಹೈಕಮಾಂಡ್ ಸೂಚಿಸಿದ್ದು, ಆದಷ್ಟು ಶೀಘ್ರವೇ ಸಂಪುಟ ರಚನೆ ಮಾಡೋದಾಗಿ ಹೇಳಿದ್ದಾರೆ.

BOMMAI 3

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಪಕ್ಷ ಬೇರೆ ಜವಾಬ್ದಾರಿ ನೀಡಿದರೆ ವಹಿಸಿಕೊಳ್ಳುವೆ. ಆದರೆ ಬೊಮ್ಮಾಯಿ ಸಂಪುಟ ಸೇರೋದಿಲ್ಲ ಅಂತ ಸ್ಪಷ್ಪಪಡಿಸಿದ್ದಾರೆ. ನಾನು ಮಾಜಿ ಸಿಎಂ ಆಗಿದ್ದರೂ, ಬಿಎಸ್‍ವೈ ಹಿರಿಯರಾಗಿದ್ದ ಕಾರಣ ಸಚಿವ ಸ್ಥಾನಕ್ಕೆ ಒಪ್ಪಿಕೊಂಡಿದ್ದೇ. ಈಗ ಸಂಪುಟ ಸೇರೋದಿಲ್ಲ ಅಂತ ಶೆಟ್ಟರ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರಕ್ರಿಯಿಸಿರೋ ಮಾಜಿ ಸಚಿವ ಈಶ್ವರಪ್ಪ, ಇನ್ನು ಬಹಳ ಬದಲಾವಣೆ ಆಗೋದು ಇದೆ. ಈ ಬಗ್ಗೆ ನಾಳೆ ಮಾತನಾಡ್ತೇನೆ ಅಂತ ಕುತೂಹಲದ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಶೆಟ್ಟರ್ ನನಗೆ ತುಂಬಾ ಆತ್ಮೀಯರು, ಅವರ ಬಳಿ ಮಾತಾಡ್ತೀನಿ: ಬೊಮ್ಮಾಯಿ

Shettar 2

ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಅವರು, ಶೆಟ್ಟರ್ ಜೊತೆ ಮಾತನಾಡ್ತೇನೆ ಅಂದಿದ್ದಾರೆ. ಮೂರ್ನಾಲ್ಕು ದಿನದಲ್ಲಿ ಅಥವಾ ಇನ್ನೊಂದು ವಾರದಲ್ಲಿ ಬೊಮ್ಮಾಯಿ ಸಂಪುಟ ರಚನೆ ಮಾಡಬೇಕಿದೆ. ಇರೋದು 33 ಸ್ಥಾನ, ಆದರೆ ಆಕಾಂಕ್ಷಿಗಳ ಸಂಖ್ಯೆ ಇದಕ್ಕೆ ಮೂರು ಪಟ್ಟು ಹೆಚ್ಚಿದೆ. ಪ್ರಾದೇಶಿಕತೆ, ಜಾತಿ, ಪ್ರಭಾವ, ಹಿರಿತನ, ಅನುಭವ, ಯುವ ಶಾಸಕರು, ವಲಸಿಗರು.. ಹೀಗೆ ಎಲ್ಲಾ ಅಂಶಗಳನ್ನು ಪರಿಗಣಿಸಿ ಅತ್ಯಂತ ಸಮತೋಲಿತ ಕ್ಯಾಬಿನೆಟ್ ರಚಿಸಿಕೊಳ್ಳಬೇಕಿದೆ. ಇದರ ಮಧ್ಯೆ, ವಲಸಿಗರ ಟೆನ್ಶನ್ ಮುಂದುವರಿದಿದೆ. ಬೊಮ್ಮಾಯಿ ನೂತನ ಸಿಎಂ ಎಂದು ಘೋಷಣೆಯಾದ ಕ್ಷಣದಿಂದ ಅವರ ಹಿಂದೆ ಕೆಲ ವಲಸಿಗರು ಸುತ್ತುತ್ತಿದ್ದಾರೆ. ಇದನ್ನೂ ಓದಿ:  ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗೋದು ನನಗೆ ಇಷ್ಟವಿಲ್ಲ: ಜಗದೀಶ್ ಶೆಟ್ಟರ್

BOMMAI 2 1

ಇತ್ತ ಪಕ್ಷಾಧ್ಯಕ್ಷ ನಳಿನ್ ಕಟೀಲ್, ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವರು ವಲಸಿಗರಿಗೆ ಅಂಥಾದ್ದೇನು ಆಗಲ್ಲ. ಮುಖ್ಯಮಂತ್ರಿಗಳು, ಯಡಿಯೂರಪ್ಪ ಹಾಗೂ ವರಿಷ್ಠರು ಕುಳಿತು ತೀರ್ಮಾನ ಮಾಡ್ತಾರೆ ಅಂದಿದ್ದಾರೆ. ಇದನ್ನೂ ಓದಿ: 2023ಕ್ಕೆ ವಿಜಯೇಂದ್ರರನ್ನ ಸಿಎಂ ಮಾಡಲು ಬೊಮ್ಮಾಯಿ ಆಯ್ಕೆ: ಆನಂದ್ ಆಸ್ನೋಟಿಕರ್

Share This Article
Leave a Comment

Leave a Reply

Your email address will not be published. Required fields are marked *