– ಹಾಲುಣಿಸಲು ಪರದಾಡ್ತಿದ್ದ ತಂದೆ-ತಾಯಿ
– ಮೂರು ತಿಂಗಳಿಂದ ಮಾಡಲು ಕೆಲಸ ಇಲ್ಲ
ಕೋಲ್ಕತಾ: ಪೋಷಕರೇ ತಮ್ಮ ಎರಡು ತಿಂಗಳ ಮಗುವನ್ನು ದೂರದ ಸಂಬಂಧಿಕರಿಗೆ ಮೂರು ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪೋರ್ ಜಿಲ್ಲೆಯಲ್ಲಿ ನಡೆದಿದೆ.
ಮಗುವಿನ ತಂದೆ ಬಾಪನ್ ಧಾರಾ ಮತ್ತು ತಾಯಿ ತಾಪ್ಸಿ ಎಂದು ಗುರುತಿಸಲಾಗಿದೆ. ತಾಯಿ ಮನೆ ಕೆಲಸ ಮಾಡುತ್ತಿದ್ದಳು. ತಂದೆ ದೈನಂದಿನ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳಿಂದ ದೇಶವೇ ಲಾಕ್‍ಡೌನ್ ಆಗಿತ್ತು. ಹೀಗಾಗಿ ದಂಪತಿ ಕಳೆದ ಮೂರು ತಿಂಗಳಿನಿಂದ ನಿರುದ್ಯೋಗಿಗಳಾಗಿದ್ದರು ಎಂದು ತಿಳಿದು ಬಂದಿದೆ.
Advertisement
Advertisement
ಹೌರಾದಲ್ಲಿರುವ ಮಗುವಿನ ಪೋಷಕರ ದೂರದ ಸಂಬಂಧಿಕರ ಮನೆಯಿಂದ ಪೊಲೀಸ್ ಅಧಿಕಾರಿಗಳ ತಂಡ ಮಗುವನ್ನು ವಶಪಡಿಸಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ವಿಚಾರ ಬೆಳಕಿಗೆ ಬಂದ ನಂತರ ಮಗುವಿನ ಪೋಷಕರು ಪರಾರಿಯಾಗಿದ್ದಾರೆ. ತನಿಖೆಯ ವೇಳೆ ದಂಪತಿ ತಮ್ಮ ಮಗುವನ್ನು 3,000 ರೂಗಳಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಗ್ನಿಶ್ವರ್ ಚೌಧರಿ ತಿಳಿಸಿದರು.
Advertisement
Advertisement
ತಾಪ್ಸಿ ಮನೆ ಕೆಲಸ ಮಾಡುತ್ತಿದ್ದಳು. ಆದರೆ ಕೊರೊನಾ ಸೋಂಕು ಹರಡುವ ಭಯದಿಂದ ಆಕೆಯನ್ನ ಮನೆ ಕೆಲಸಕ್ಕೆ ಬರಬಾರದೆಂದು ಹೇಳಲಾಗಿತ್ತು. ಪತಿ ಬಾಪನ್ ದೈನಂದಿನ ಕೂಲಿ ಕೆಲಸ ಮಾಡುತ್ತಿದ್ದನು. ಹೀಗಾಗಿ ದಂಪತಿ ಕಳೆದ ಮೂರು ತಿಂಗಳಿನಿಂದ ನಿರುದ್ಯೋಗಿಯಾಗಿದ್ದರು. ಹೀಗಾಗಿ ಊಟ ಮಾಡಲು ಆಹಾರವಿಲ್ಲದೆ, ಮಗುವಿಗೆ ಹಾಲುಣಿಸಲು ಕೂಡ ಸಾಧ್ಯವಾಗದೇ ಪರದಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ.
ತಾಪ್ಸಿ ಮನೆಯಲ್ಲಿ ಮಗುವಿನ ಅಳುವಿನ ಶಬ್ದ ಕೇಳುತ್ತಿರಲಿಲ್ಲ. ಅಲ್ಲದೇ ಮಗು ಕೂಡ ಕಾಣುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ನೆರೆಯವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ತನಿಖೆ ಮಾಡಿದಾಗ ದಂಪತಿಯ ದೂರದ ಸಂಬಂಧಿಕರ ಮನೆಯಲ್ಲಿ ಮಗುವಿರುವುದು ಪತ್ತೆಯಾಗಿದೆ. ಅವರಿಂದ ಮಗುವನ್ನು ವಶಪಡಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಂದೀಪ್ ಕುಮಾರ್ ಬೋಸ್ ತಿಳಿಸಿದ್ದಾರೆ.