2 ಕೋಟಿ ಮೌಲದ್ಯ ಫೆರಾರಿ ಕಾರನ್ನು ಕದ್ದು ಮಾರಲು ಯತ್ನಿಸಿದ ಮೂವರು ಅರೆಸ್ಟ್

Public TV
2 Min Read
Ferrari

– ಹೈದರಾಬಾದ್‍ನಲ್ಲಿ ಕದ್ದು ದೆಹಲಿಯಲ್ಲಿ ಮಾರಲು ಯತ್ನ

ಹೈದರಾಬಾದ್: 2 ಕೋಟಿ ಬೆಲೆಬಾಳುವ ಐಷಾರಾಮಿ ಫೆರಾರಿ ಕಾರನ್ನು ಕದ್ದು ಬೇರೆಯವರಿಗೆ ಮಾರಲು ಪ್ರಯತ್ನಿಸಿದ ಮೂವರು ಕಳ್ಳರನ್ನು ಹೈದರಾಬಾದ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನೀರಜ್ ಶರ್ಮಾ, ಭೂಪಿಂದರ್ ಮತ್ತು ಸದ್ದಾಂ ಎಂದು ಗುರುತಿಸಲಾಗಿದೆ. ಇದರಲ್ಲಿ ನೀರಜ್ ಶರ್ಮಾ ಉನ್ನತ ಮಟ್ಟದ ಕಾರು ವ್ಯಾಪಾರಿಯಾಗಿದ್ದಾನೆ. ಈ ಮೂವರು ಹೈದರಾಬಾದ್ ಮೂಲದ ಉದ್ಯಮಿಯ ಫೆರಾರಿ ಕಾರನ್ನು ಕದ್ದು, ದೆಹಲಿಯಲ್ಲಿ ಮಾರಲು ಪ್ರಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾರೆ.

FERRARI

ಹೈದರಾಬಾದ್ ಮೂಲದ ಉದ್ಯಮಿ ದಿವೇಶ್ ಗಾಂಧಿ ಜೂನ್ 23ರಂದು ನನ್ನ ಫೆರಾರಿ ಕಾರನ್ನು ನನ್ನ ಪಕ್ಕದ ಮನೆಯಿಂದ ಯಾರೋ ಮೂವರ ಅಪರಿಚಿತ ವ್ಯಕ್ತಿಗಳು ಕಳವು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದಿವೇಶ್ ಅವರ ಪ್ರಕಾರ ಈ ಕಾರನ್ನು ಅವರು, 2019ರಲ್ಲಿ ಕೇರಳದ ಮೂಲದ ವ್ಯಕ್ತಿಯಿಂದ 2 ಕೋಟಿ ಕೊಟ್ಟು ಖರೀದಿ ಮಾಡಿದ್ದರು. ಖರೀದಿ ವೇಳೆ ಡೀಲರ್ ನೀರಜ್ ಶರ್ಮಾ ಮತ್ತು ಆತನ ಸ್ನೇಹಿತ ಬೆಂಗಳೂರು ನಿವಾಸಿ ಗಣೇಶನ ಸಹಾಯ ಪಡೆದಿದ್ದರು.

car

ದಿವೇಶ್ ಖರೀದಿಸಿದ್ದ ಕಾರು ದೆಹಲಿ ನೋಂದಣಿ ಸಂಖ್ಯೆ ಹೊಂದಿತ್ತು, ಈ ಕಾರಣದಿಂದ ಕಾರನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ದೆಹಲಿ ಮೂಲದ ಕಾರ್ ಡೀಲರ್ ಪ್ರಿನ್ಸ್ ಪಾಠಕ್ ಜೊತೆ ಸಂಪರ್ಕದಲ್ಲಿ ಇದ್ದರು. ಅವರಿಗೆ ಬೇಕಾದ ದಾಖಲೆಯನ್ನು ಕೂಡ ಕಳಹಿಸಿದ್ದರು. ನಂತರ ದೀವಿಶ್ ಯವುದೋ ಕೆಲಸದ ಮೇಲೆ ಕಳೆದ ಡಿಸೆಂಬರ್ ನಲ್ಲಿ ಅಮೆರಿಕಗೆ ಹೋಗಿದ್ದಾರೆ. ಆಮೇಲೆ ಕೊರೊನಾ ಲಾಕ್‍ಡೌನ್ ಆಗಿ ಅಲ್ಲೇ ಉಳಿದುಕೊಂಡಿದ್ದಾರೆ.

ಈ ವೇಳೆ ದಿವೇಶ್ ಅಮೆರಿಕಗೆ ಹೋಗುವಾಗ ಕಾರನ್ನು ಪಕ್ಕದ ಮನೆಯ ಖಾಲಿ ಜಾಗದಲ್ಲಿ ನಿಲ್ಲಿಸಿ ಹೋಗಿದ್ದರು. ಇದಾದ ನಂತರ ಜೂನ್ 23ರಂದು ಪಕ್ಕದ ಮನೆಯವರ ಬಳಿ ಬಂದ ಮೂವರು ನಾವು ದಿವೇಶ್ ಸ್ನೇಹಿತರು ಕಾರನ್ನು ಆತ ಸರಿಮಾಡಲು ಹೇಳಿದ್ದಾನೆ ಎಂದು ಕೀ ಪಡೆದುಕೊಂಡು ಕಾರನ್ನು ಎಗರಿಸಿಕೊಂಡು ಹೋಗಿದ್ದಾರೆ. ಇದಾದ ನಂತರ ದಿವೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.

police 1 e1585506284178

ದೂರು ಸ್ವೀಕರಿಸಿದ ಪೊಲೀಸರು ಸಿಸಿಟಿವಿ ವಿಡಿಯೋ ಬಳಸಿ ಕಳ್ಳರನ್ನು ಸೆರೆಹಿಡಿದು ಕಾರನ್ನು ಸೀಜ್ ಮಾಡಿದ್ದಾರೆ. ಜೊತೆಗೆ ತನಿಖೆ ವೇಳೆ ಕಾರ್ ಡೀಲರ್ ಪಠಾಕ್ ನಕಲಿ ದಾಖಲೆ ಸೃಷ್ಟಿಸಿ ಕಾರನ್ನು ಬಿಲಲ್ ಎಂಬವರ ಹೆಸರಿಗೆ ವರ್ಗಾಹಿಸಿರುವುದು ತಿಳಿದು ಬಂದಿದೆ, ಪಠಾಕ್ ಈಗ ಎಸ್ಕೇಪ್ ಆಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *