ಮುಂಬೈ: ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ ವಿರಾಟ್ ಕೊಯ್ಲಿ ನಿಧಿ ಸಂಗ್ರಹಕ್ಕೆ ಅಭಿಯಾನ ಶುರು ಮಾಡಿದ್ದಾರೆ. ಇದರ ಮೊದಲ ಹೆಜ್ಜೆ ಎಂಬಂತೆ 2 ಕೋಟಿ ರೂ.ಗಳನ್ನು ಈ ಸ್ಟಾರ್ ದಂಪತಿ ದೇಣಿಗೆಯಾಗಿ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಯ್ಲಿ ಮಾಹಿತಿ ನೀಡಿದ್ದಾರೆ.
Advertisement
ಕೊವಿಡ್‍ನಿಂದಾಗಿ ಭಾರತದ ಪರಿಸ್ಥಿತಿ ಕಷ್ಟದಲ್ಲಿದೆ. ದೇಶವನ್ನು ಈ ರೀತಿ ನೋಡಲು ನೋವಾಗುತ್ತದೆ. ಈ ಸಂದರ್ಭದಲ್ಲಿ ಹಗಲು-ರಾತ್ರಿ ಹೋರಾಡುತ್ತಿರುವ ಎಲ್ಲರಿಗೂ ನಾವು ಆಭಾರಿ ಆಗಿದ್ದೇವೆ. ಅವರ ಬದ್ಧತೆಯನ್ನು ಮೆಚ್ಚಲೇಬೇಕು. ಈ ಸಂದರ್ಭದಲ್ಲಿ ಅವರಿಗೆ ನಮ್ಮ ಬೆಂಬಲ ಬೇಕು. ಈ ಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿರಬೇಕು. ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ನಾವು ಕಾಪಾಡಬೇಕು ಎಂದು ಹೇಳಿದ್ದಾರೆ.
Advertisement
View this post on Instagram
Advertisement
ಕಳೆದ ವರ್ಷದಿಂದಲೂ ಜನರು ಪಡುತ್ತಿರುವ ಕಷ್ಟ ನೋಡಿ ನಮಗೆ ಶಾಕ್ ಆಗಿದೆ. ನಮ್ಮ ಕೈಲಾದ ಸಹಾಯವನ್ನು ಮಾಡಲು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ದೇಶಕ್ಕೆ ಎಲ್ಲಕ್ಕಿಂತ ಹೆಚ್ಚು ಬೆಂಬಲ ಬೇಕಾಗಿದೆ. ಅವಶ್ಯಕತೆ ಇರುವವರಿಗೆ ಸೂಕ್ತ ಸಹಾಯ ಒದಗಿಸಲು ಈ ನಿಧಿ ಸಂಗ್ರಹ ಅಭಿಯಾನ ಯಶಸ್ವಿ ಆಗುತ್ತದೆ ಎಂಬ ನಂಬಿಕೆ ನಮಗಿದೆ. ಪರಸ್ಪರರ ಸಹಾಯಕ್ಕೆ ದೇಶದ ಜನರು ಮುಂದೆ ಬರುತ್ತಾರೆ ಎಂಬ ನಂಬಿಕೆ ಇದೆ ಎಂದು ವಿರಾಟ್ ಕೊಯ್ಲಿ ಹೇಳಿದ್ದಾರೆ.
Advertisement
As our country battles the second wave of Covid-19, and our healthcare systems are facing extreme challenges, it breaks my heart to see our people suffering.
So, Virat and I have initiated a campaign #InThisTogether, with Ketto, to raise funds for Covid-19 relief. pic.twitter.com/q71BR7VtKc
— Anushka Sharma (@AnushkaSharma) May 7, 2021
ಮೇ 1ರಂದು ಅನುಷ್ಕಾ ಶರ್ಮಾ ಅವರ ಜನ್ಮದಿನ. ಆದರೆ ಈ ಬಾರಿ ಕೊರೊನಾ ವೈರಸ್‍ನಿಂದ ದೇಶವೇ ಕಷ್ಟದಲ್ಲಿರುವ ಕಾರಣ ಅವರು ಯಾವುದೇ ಸಂಭ್ರಮಾಚರಣೆ ಮಾಡಿಕೊಳ್ಳಲಿಲ್ಲ. ನಿಮ್ಮೆಲ್ಲರಿಂದಾಗಿ ಈ ದಿನ ನನಗೆ ನಿಜಕ್ಕೂ ಸ್ಪೆಷಲ್ ಎನಿಸಿದೆ. ಆದರೆ ಈ ಕಷ್ಟದ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಎಂದು ನನಗೆ ಅನಿಸಿತು. ನೀವು ಮಾಡಿದ ಎಲ್ಲ ಮೆಸೇಜ್ ನೋಡಿದ್ದೇನೆ. ಅದೇ ರೀತಿ ನಿಮಗಾಗಿ ನನ್ನ ಕಡೆಯಿಂದ ಒಂದು ಮುಖ್ಯವಾದ ಮೆಸೇಜ್ ಇದೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಜೊತೆಯಾಗಿದ್ದು ದೇಶಕ್ಕೆ ಬೆಂಬಲ ನೀಡಬೇಕು ಎಂದು ಅನುಷ್ಕಾ ಹೇಳಿದ್ದರು.
ನಾನು ಮತ್ತು ವಿರಾಟ್ ನಮ್ಮ ಪಾಲಿನ ಕೆಲಸ ಮಾಡುತ್ತಿದ್ದೇವೆ. ಆ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ. ನೀವು ಕೂಡ ಈ ಅಭಿಯಾನದಲ್ಲಿ ಭಾಗಿ ಆಗಬಹುದು. ಈ ಸಂದರ್ಭದಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂಬುದು ನೆನಪಿರಲಿ. ಎಲ್ಲರೂ ಸುರಕ್ಷಿತವಾಗಿರಿ. ನಿಮ್ಮ ಕಾಳಜಿವಹಿಸಿ ಎಂದು ಅನುಷ್ಕಾ ಹೇಳಿದ್ದರು. ಕೊಟ್ಟ ಮಾತಿಗೆ ತಕ್ಕಂತೆಯೇ ಇಂದು ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ, 2 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
Anushka and I have started a campaign on @ketto, to raise funds for Covid-19 relief, and we would be grateful for your support.
Let’s all come together and help those around us in need of our support.
I urge you all to join our movement.
Link in Bio! ????#InThisTogether pic.twitter.com/RjpbOP2i4G
— Virat Kohli (@imVkohli) May 7, 2021