ಹೈದರಾಬಾದ್: ನೂರಾರು ವಾಹನಗಳು ಚಲಿಸುತ್ತಿರುವ ರಸ್ತೆಯಲ್ಲಿ 2 ಕಿ.ಮೀ ಓಡಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿರುವ ಹೈದರಾಬಾದ್ ಟ್ರಾಫಿಕ್ ಕಾನ್‍ಸ್ಟೆಬಲ್ ವಿಡಿಯೋ ಸಖತ್ ವೈರಲ್ ಆಗಿದೆ.
ನವೆಂಬರ್2 ರಂದು ಸಂಜೆ ಸುಮಾರು 6 ರಿಂದ 7 ಗಂಟೆಗೆ ಸಮಯದಲ್ಲಿ ರಸ್ತೆಯಲ್ಲಿ ದಟ್ಟವಾದ ವಾಹನ ಸಂಚಾರ ಇತ್ತು. ಈ ವೇಳೆ ಅಂಬುಲೆನ್ಸ್‌ನಲ್ಲಿ ರೋಗಿ ಇರುವುದನ್ನು ಗಮನಿಸಿದ ಕಾನ್‍ಸ್ಟೆಬಲ್ ಜಿ.ಬಾಬ್ಜಿ ರಸ್ತೆಯ ಮಧ್ಯದಲ್ಲಿ ಓಡಿ ಟ್ರಾಫಿಕ್ ಕ್ಲೀಯರ್ ಮಾಡುತ್ತಾ ಸಾಗಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಹಲವರು ಕಾನ್‍ಸ್ಟೆಬಲ್ ಜಿ.ಬಾಬ್ಜಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
आपकी मदद के लिए #Khaakhi मीलों दौड़ जाएगी, पर कभी थमेगी नहीं.
Hyderabad Cop ran few miles to help ambulance. Hope the patient is fine now.#IndiaSalutesYou for sheer dedication & service.@HYDTP @hydcitypolice pic.twitter.com/yZytjDztcc
— Dipanshu Kabra (@ipskabra) November 5, 2020
Advertisement
ಕಾನ್‍ಸ್ಟೆಬಲ್ ಬಾಬ್ಜಿ ಅವರು ಹೈದರಾಬಾದ್ ನಗರದ ಜಿಪಿಒ ಜಂಕ್ಷನ್, ಅಬ್ದಿಸ್ ಮತ್ತು ಕೋಟಿಯ ಆಂಧ್ರ ಬ್ಯಾಂಕ್ ನಡುವಿನ ರಸ್ತೆಯಲ್ಲಿ ಸುಮಾರು 2 ಕಿ ಮೀ ಓಡಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಬ್ಜಿ ಅವರು, ಅಂಬ್ಯುಲೆನ್ಸ್ ಜಿಪಿಒ ಜಂಕ್ಷನ್‍ಗೆ ತಲುಪಿದಾಗ ಸಂಜೆ 7 ಗಂಟೆ ಆಗಿತ್ತು. ಟ್ರಾಫಿಕ್‍ನಲ್ಲಿ ಸಿಲುಕಿಕೊಂಡಿರುವುದನ್ನು ಗಮನಿಸಿದೆ. ನಾನು ಏನನ್ನಾದರೂ ಸಹಾಯ ಮಾಡಬಹುದಾಗಿತ್ತು ಎಂದುಕೊಂಡು ರಸ್ತೆಯಲ್ಲಿ ಆಂಧ್ರ ಬ್ಯಾಂಕ್ ಕಡೆಗೆ ಓಡಿ ಅಂಬುಲೆನ್ಸ್ ಗೆ ಸ್ವಲ್ಪ ಸ್ಥಳಾವಕಾಶ ನೀಡುವಂತೆ ವಾಹನ ಚಾಲಕರಲ್ಲಿ ಕೇಳಿಕೊಂಡೆ. ಆಗ ವಾಹನ ಸವಾರರು ಅಂಬುಲೆನ್ಸ್ ಹೋಗಲು ಜಾಗ ಮಾಡಿಕೊಟ್ಟರು ಎಂದು ಹಳಿದ್ದಾರೆ.
Advertisement
ನನ್ನ ಪ್ರಾಮಾಣಿಕತೆಯನ್ನು ನೋಡಿದ ವಾಹನ ಚಾಲಕರು ಮೆಚ್ಚುಗೆಯೊಂದಿಗೆ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು. ಅನೇಕ ವಾಹನ ಚಾಲಕರು ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ. ನನಗೆ ಅಪಾರ ಸಂತೋಷ ಮತ್ತು ತೃಪ್ತಿಯನ್ನು ನೀಡಿದೆ ಎಂದು ಟ್ರಾಫಿಕ್ ಕಾನ್‍ಸ್ಟೆಬಲ್ ಬಾಬ್ಜಿ ಸಂತಸ ವ್ಯಕ್ತಪಡಿಸಿದ್ದಾರೆ.