ಪುಣೆ: ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ಇಂದು ಅತ್ಯುತ್ತಮ ಆಟವನ್ನು ಪ್ರದರ್ಶಿಸಿ ಭಾರತದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿ 1-1 ರಲ್ಲಿ ಸಮಬಲಗೊಂಡಿದೆ.
ಗೆಲ್ಲಲು 337 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್ ಇನ್ನೂ 39 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ನಷ್ಟಕ್ಕೆ 337 ರನ್ ಹೊಡೆಯುವ ಮೂಲಕ ಗೆಲುವಿನ ನಗೆ ಬೀರಿತು.
ಎರಡು ಅತ್ಯುತ್ತಮ ಜೊತೆಯಾಟದಿಂದ ಇಂಗ್ಲೆಂಡ್ ತಂಡ ಇಂದಿನ ಪಂದ್ಯವನ್ನು ಗೆದ್ದುಕೊಂಡಿದೆ. ಮೊದಲ ವಿಕೆಟಿಗೆ ಜೇಸನ್ ರಾಯ್ ಮತ್ತು ಜಾನಿ ಬೈರ್‌ಸ್ಟೋ 102 ಎಸೆತಗಳಿಗೆ 110 ರನ್ ಜೊತೆಯಾಟವಾಡಿದರೆ ಎರಡನೇ ವಿಕೆಟಿಗೆ ಬೈರ್‌ಸ್ಟೋ ಮತ್ತು ಬೆನ್ ಸ್ಟೋಕ್ಸ್ 117 ಎಸೆತಗಳಿಗೆ 175 ರನ್ ಜೊತೆಯಾಟವಾಡಿದರು. ಕೊನೆಯಲ್ಲಿ ಮುರಿಯದ 5ನೇ ವಿಕೆಟಿಗೆ ಡೇವಿಡ್ ಮಲಾನ್ ಮತ್ತು ಲಿವಿಂಗ್‌ಸ್ಟೋನ್ ಅವರು 43 ಎಸೆತಗಳಲ್ಲಿ 50 ರನ್ ಜೊತೆಯಾಟವಾಡಿ ಇಂಗ್ಲೆಂಡ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಜೇಸನ್ ರಾಯ್ 55 ರನ್( 52 ಎಸೆತ, 7 ಬೌಂಡರಿ, 1 ಸಿಕ್ಸರ್) ಜಾನಿ ಬೈರ್‌ಸ್ಟೋ 124 ರನ್(112 ಎಸೆತ, 11 ಬೌಂಡರಿ, 7 ಸಿಕ್ಸರ್), ಬೆನ್ ಸ್ಟೋಕ್ಸ್ 99 ರನ್( 52 ಎಸೆತ, 4 ಬೌಂಡರಿ, 10 ಸಿಕ್ಸರ್) ಡೇವಿಡ್ ಮಲಾನ್ ಔಟಾಗದೇ 16 ರನ್, ಲಿಯಾಮ್ ಲಿವಿಂಗ್‌ಸ್ಟೋನ್ ಔಟಾಗದೇ 27 ರನ್ ಹೊಡೆದರು.
FIFTY for @benstokes38 ????
Scorecard: https://t.co/IPgfrmND29
???????? #INDvENG ???????????????????????????? pic.twitter.com/Ddmf4AKB9c
— England Cricket (@englandcricket) March 26, 2021
ಪ್ರಸಿದ್ದ್ ಕೃಷ್ಣ 2 ವಿಕೆಟ್, ಭುವನೇಶ್ವರ್ ಕುಮಾರ್ 1 ವಿಕೆಟ್ ಕಿತ್ತರು. ಕುಲದೀಪ್ ಯಾದವ್ 84 ರನ್ ನೀಡಿದರೆ, ಕೃನಾಲ್ ಪಾಂಡ್ಯ 6 ಓವರ್ ಎಸೆದು 72 ರನ್ ನೀಡಿದರು. ಶಾರ್ದೂಲ್ ಠಾಕೂರ್ 7.3 ಓವರ್ ಎಸೆದು 54 ರನ್ ನೀಡಿ ದುಬಾರಿಯಾದರು.
ಆರಂಭಿಕ ಆಟಗಾರನಾಗಿ ಆಗಮಿಸಿ ಶತಕ ಸಿಡಿಸಿದ ಜಾನಿ ಬೈರ್‌ಸ್ಟೋ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಮಾರ್ಚ್ 28 ರಂದು ಪುಣೆ ಮೈದಾನದಲ್ಲೇ ಕೊನೆಯ ಫೈನಲ್ ಪಂದ್ಯ ನಡೆಯಲಿದೆ.