ಚಿಕ್ಕೋಡಿ(ಬೆಳಗಾವಿ): ಕೊರೊನಾ ವೈರಸ್ ಆತಂಕದಿಂದ ಶ್ವಾನವೊಂದು ಕ್ವಾರಂಟೈನ್ ಆಗಿದೆ.
ಕ್ವಾರಂಟೈನ್ ಆಗಿರೋ ಶ್ವಾನ ಸುಮಾರು 2000 ಕಿ.ಮೀ ಪ್ರವಾಸ ಮಾಡಿದೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಾಪೂರ ತಾಲೂಕಿನ ಬೇನಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
Advertisement
Advertisement
ಕೋಲ್ಕತ್ತಾದಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಶಿಂಧೆ ಎನ್ನುವ ಕುಟುಂಬ ಕೊರೊನಾ ಆತಂಕದಿಂದ ತಮ್ಮ ಸ್ವ-ಗ್ರಾಮಕ್ಕೆ ಆಗಮಿಸಿದೆ. ಹೀಗಾಗಿ ಈ ಕುಟುಂಬದ ಒಂದು ಸದಸ್ಯನಂತೆ ಇರುವ ಈ ಶ್ವಾನ ಟೈಗರ್ ಈ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಿರುವ ಕೋಳಿ ಫಾರಂನಲ್ಲೇ ಕ್ವಾರಂಟೈನ್ ಆಗಿದೆ.
Advertisement
Advertisement
ದಿನನಿತ್ಯ ಏರ್ ಕಂಡಿಷನ್ ದಲ್ಲಿ ಇರುತ್ತಿದ್ದ ಶ್ವಾನಗೆ ಇದೀಗ ಬಿಸಿಲಿನ ಬೇಗೆಯಿಂದ ತಪ್ಪಿಸಲು ಎರಡು ಬಾರಿ ತಣ್ಣೀರಿನಿಂದ ಸ್ನಾನ ಮಾಡಿಸುತ್ತಿದ್ದಾರೆ. ತಮ್ಮ ಕುಟುಂಬದ ಸದಸ್ಯನಂತೆ ಇರುವ ಈ ಟೈಗರ್ ಶ್ವಾನ ಈಗ ಶಿಂಧೆ ಕುಟುಂಬದೊಂದಿಗೆ ಕ್ವಾರಂಟೈನ್ ಆಗಿದ್ದು ಈಗ ಚರ್ಚೆಗೆ ಕಾರಣವಾಗಿದೆ.