ಅಹಮ್ಮದಾಬಾದ್: ವ್ಯಕ್ತಿಯೊಬ್ಬ ಎರಡನೇ ಬಾರಿಗೆ ಮದುವೆಯಾಗುವ ಉದ್ದೇಶವನ್ನು ಆಕ್ಷೇಪಿಸಿದ್ದಕ್ಕೆ ಮಗನಿಗೆ ಕಚ್ಚಿದ ಅಚ್ಚರಿಯ ಪ್ರಸಂಗವೊಂದು ಅಹಮ್ಮದಾಬಾದ್‍ನ ದರಿಯಾಪುರ ಪ್ರದೇಶದಲ್ಲಿ ನಡೆದಿದೆ.
ಆರೋಪಿ ತಂದೆಯನ್ನು ನಯೀಮುದ್ದೀನ್ ಶೇಖ್ ಹಾಗೂ ಮಗನನ್ನು ಯಹ್ಯಾ ಶೇಖ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ವೈದ್ಯಕೀಯ ಪ್ರತಿನಿಧಿಯಾಗಿ ಕೆಸ ಮಾಡುತ್ತಿದ್ದು, ಇದೀಗ ತನ್ನ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.
ಮಗ ಯಹ್ಯಾ ಪೊಲೀಓಸರಿಗೆ ನೀಡಿದ ದೂರಿನಲ್ಲಿ, ಕಳೆದ ಮೂರು ವರ್ಷಗಳಿಂದ ತನ್ನ ತಂದೆ ಕುಟುಂಬದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. ಎಂದು ಉಲ್ಲೇಖಿಸಿದ್ದಾನೆ. ಯಹ್ಯಾ ಮತ್ತು ಆತನ ತಾಯಿ ಅದೇ ಮನೆಯ ಫಸ್ಟ್ ಫ್ಲೋರ್ ನಲ್ಲಿ ವಾಸವಾಗಿದ್ದರೆ, ತಂದೆ ನೆಲಮಹಡಿಯಲ್ಲಿ ನೆಲೆಸಿದ್ದಾನೆ.
ಸೋಮವಾರ ತಾಯಿ, ಮಗನ ಬಳಿ ಬಂದು ತಾನು ಎರಡನೇ ಮದುವೆಯಾಗುವುದಾಗಿ ನಯೀಮುದ್ದೀನ್ ಹೇಳಿದ್ದಾನೆ. ಆದತೆ ತಂದೆಯ ಮಾತಿಗೆ ಮಗ ಸೊಪ್ಪು ಹಾಕಿಲಿಲ್ಲ. ಅಲ್ಲದೆ ಮದುವೆಗೆ ಮಗ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ನಯೀಮುದ್ದೀನ್, ಮಗನ ಭುಜ ಮತ್ತು ಕೆನ್ನೆಗೆ ಕಚ್ಚಿದ್ದಾನೆ. ಅಲ್ಲದೆ ಪಕ್ಕದಲ್ಲಿದ್ದ ಪತ್ನಿ ಜುಬೇದಬಾನೋ ಮುಖಕ್ಕೂ ಹೊಡೆದಿದ್ದಾನೆ.
ತಂದೆಯ ವರ್ತನೆಯಿಂದ ಗಾಬರಿಗೊಂಡ ಮಗ ಯಹ್ಯಾ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಅಲ್ಲದೆ ತನ್ನ ತಂದೆಯ ವಿರುದ್ಧವೇ ಪೊಲೀಸರಿಗೆ ದೂರು ನಿಡಿದ್ದಾನೆ.